ಸರ್ಕಾರಿ ಶಾಲೆ ಮುಚ್ಚದಂತೆ ನಿಗಾವಹಿಸಿ

ದೇವಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಲಿ ವಿಧಾನಸಭೆ ಕ್ಷೇತ್ರದ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಎಚ್.ಕುಮಾರಸ್ವಾಮಿ ಮಾತನಾಡಿದರು. ಮುಖ್ಯ ಶಿಕ್ಷಕರಾದ ಎಚ್.ಪಿ.ಸೋಮಶೇಖರ, ನಂದಕಿಶೋರ್, ಸಿಂಡಿಕೇಟ್ ಸದಸ್ಯ ಕೆ.ಶಿವಕುಮಾರ್, ಶಿಕ್ಷಕರಾದ ನಾಗರಾಜ, ಬಸವರಾಜ ಇತರರಿದ್ದರು.
ದೇವಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಲಿ ವಿಧಾನಸಭೆ ಕ್ಷೇತ್ರದ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಎಚ್.ಕುಮಾರಸ್ವಾಮಿ ಮಾತನಾಡಿದರು. ಮುಖ್ಯ ಶಿಕ್ಷಕರಾದ ಎಚ್.ಪಿ.ಸೋಮಶೇಖರ, ನಂದಕಿಶೋರ್, ಸಿಂಡಿಕೇಟ್ ಸದಸ್ಯ ಕೆ.ಶಿವಕುಮಾರ್, ಶಿಕ್ಷಕರಾದ ನಾಗರಾಜ, ಬಸವರಾಜ ಇತರರಿದ್ದರು.
Published on

ದೇವಲಾಪುರದಲ್ಲಿ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಎಚ್.ಕುಮಾರಸ್ವಾಮಿ ಸಲಹೆ

ಕಂಪ್ಲಿ: ಸರ್ಕಾರಿ ಶಾಲೆ ಮುಚ್ಚದಂತೆ ಶಾಲೆಗೆ ಮಕ್ಕಳನ್ನು ಕರೆತರುವಲ್ಲಿ ಶಿಕ್ಷಕರು ಮುತುವರ್ಜಿವಹಿಸಬೇಕು ಎಂದು ಕಂಪ್ಲಿ ವಿಧಾನಸಭೆ ಕ್ಷೇತ್ರದ ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಎಚ್.ಕುಮಾರಸ್ವಾಮಿ ಹೇಳಿದರು.
ಶಿಕ್ಷಣ ಇಲಾಖೆ ಮತ್ತು ಶಾಸಕರ ಆದೇಶದನ್ವಯ ದೇವಲಾಪುರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ ಶಿಕ್ಷಕರೊಂದಿಗೆ ಸಮಾಲೋಚಿಸಿ ಮಾತನಾಡಿದರು.
2025-26ನೇ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲಾತಿಗಾಗಿ ಶಿಕ್ಷಕರು ಮಕ್ಕಳ ಸಮೀಕ್ಷೆ ಮಾಡಿ ಹೆಸರು ಸಂಗ್ರಹಿಸಲು ಯೋಜನೆ ರೂಪಿಸಿಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರಬೇಕು. ಶಾಲೆಗೆ ಮಂಜೂರಾದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿ ನೆರವೇರಿಸಬೇಕು. ಶಾಲೆ ಅಭಿವೃದ್ಧಿಗಾಗಿ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸಮಿತಿ ಸಮನ್ವಯ ಸಾಧಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಮುಖ್ಯ ಶಿಕ್ಷಕರಾದ ಎಚ್.ಪಿ.ಸೋಮಶೇಖರ, ನಂದಕಿಶೋರ್, ಶ್ರೀ ಕೃಷ್ಣದೇವರಾಯ ವಿವಿಯ ಸಿಂಡಿಕೇಟ್ ಸದಸ್ಯ ಕೆ.ಶಿವಕುಮಾರ್, ಶಿಕ್ಷಕರಾದ ನಾಗರಾಜ, ಬಸವರಾಜ, ಜ್ಯೋತಿ, ಗೀತಾ, ಕವಿತಾ, ಶ್ಯಾಮಲಾ, ಮಹಮ್ಮದ್ ಸೊಹೇಲ್, ಪ್ರಮುಖರಾದ ಮಲ್ಲಿಕಾರ್ಜುನ, ರಾಮಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net