ಭ್ರಷ್ಟಾಚಾರ ನಿವಾರಣೆಗಾಗಿ ಕಾಯ್ದೆ ಜಾರಿ

ಬಳ್ಳಾರಿಯ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಪೀಠದ ಅಯುಕ್ತ ರುದ್ರಣ್ಣ ಹರ್ತಿಕೋಟೆ ಉದ್ಘಾಟಿಸಿದರು. ಆಯುಕ್ತರಾದ ಎಸ್.ರಾಜಶೇಖರ್, ಬಿ.ವೆಂಕಟಸಿಂಗ್, ಎಡಿಸಿ ಮಹ್ಮಮದ್ ಜುಬೇರ್ ಇದ್ದರು.
ಬಳ್ಳಾರಿಯ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಪೀಠದ ಅಯುಕ್ತ ರುದ್ರಣ್ಣ ಹರ್ತಿಕೋಟೆ ಉದ್ಘಾಟಿಸಿದರು. ಆಯುಕ್ತರಾದ ಎಸ್.ರಾಜಶೇಖರ್, ಬಿ.ವೆಂಕಟಸಿಂಗ್, ಎಡಿಸಿ ಮಹ್ಮಮದ್ ಜುಬೇರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಡಳಿತ
  • ಸಿಬ್ಬಂದಿ
  • ಭ್ರಷ್ಟಾಚಾರ
ಬಳ್ಳಾರಿ : ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಭ್ರಷ್ಟಾಚಾರ ನಿವಾರಣೆಗಾಗಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಪೀಠದ ಅಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಾನಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿ - ಸಿಬ್ಬಂದಿಗೆ ಶನಿವಾರ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಗರಿಕರು ಸಬಲೀಕರಣಗೊಳಿಸುವ ಉದ್ದೇಶವೂ ಹೊಂದಿದೆ. ವೈಯಕ್ತಿಕ ಮಾಹಿತಿ ಹೊರತುಪಡಿಸಿ, ಸರ್ಕಾರದ ಯೋಜನೆ, ಸೌಲಭ್ಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುವುದು ಸಾರ್ವಜನಿಕರ ಮೂಲಭೂತ ಹಕ್ಕಾಗಿದೆ. ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಅಧಿಕಾರಿಗಳು ಸಕಾಲದಲ್ಲಿ ಮಾಹಿತಿ ನೀಡುವ ಮೂಲಕ ದಂಡದಿಂದ ಮುಕ್ತರಾಗಬೇಕು ಎಂದರು.
ರಾಜ್ಯದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಮಾಹಿತಿ ಪ್ರಾಧಿಕಾರಗಳಿವೆ. ಆಯೋಗ ರಚನೆಯಾದಾಗಿನಿಂದ ರಾಜ್ಯದ ನಾನಾ ಇಲಾಖೆಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ-11,444, ಕಂದಾಯ-5,963, ನಗರಾಭಿವೃದ್ಧಿ ಇಲಾಖೆ-4620, ಶಿಕ್ಷಣ ಇಲಾಖೆ-1599, ಲೋಕೋಪಯೋಗಿ ಇಲಾಖೆ-1,365 ಸೇರಿದಂತೆ 34,684 ಪ್ರಕರಣಗಳು ಬಾಕಿಯಿವೆ. ರಾಜ್ಯದಲ್ಲಿ 10,757 ಪ್ರಕರಣಗಳಲ್ಲಿ 10.20 ಕೋಟಿ ರೂ. ದಂಡ ವಿಧಿಸಲಾಗಿದೆ. ಅದರಲ್ಲಿ 3,084 ಅಧಿಕಾರಿಗಳು 2.70 ಕೋಟಿ ರೂ. ದಂಡ ಪಾವತಿಸಿದ್ದಾರೆ ಎಂದರು.
ಅದೇರೀತಿಯಾಗಿ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ-372, ಕಂದಾಯ-144, ನಗರಾಭಿವೃದ್ಧಿ ಇಲಾಖೆ-42, ಶಿಕ್ಷಣ ಇಲಾಖೆ-38 ಸೇರಿದಂತೆ ಒಟ್ಟು 769 ಪ್ರಕರಣಗಳು ಬಾಕಿ ಉಳಿದಿವೆ. ಈ ಪೈಕಿ 163 ಪ್ರಕರಣದಲ್ಲಿ ಅಧಿಕಾರಿಗಳಿಗೆ 15.45 ಲಕ್ಷ ರೂ. ದಂಡ ವಿಧಿಸಲಾಗಿದ್ದು, 28 ಅಧಿಕಾರಿಗಳಿಂದ 3.58 ಲಕ್ಷ ರೂ. ಪಾವತಿಯಾಗಿದೆ. ಉಳಿದ ಮೊತ್ತವನ್ನು ವಸೂಲಿ ಮಾಡಲು ಕಾರ್ಯದರ್ಶಿಯವರ ಮೂಲಕ ಈಗಾಗಲೇ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.
ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್‌ಸಿಂಗ್ ಮಾತನಾಡಿ, ಕಳೆದ ಸಾಲಿನ ಫೆಬ್ರವರಿ ಮಾಹೆಯಲ್ಲಿ 6 ಜನರನ್ನು ರಾಜ್ಯದ ನಾನಾ ಪೀಠಗಳಿಗೆ ಮಾಹಿತಿ ಆಯೋಗದ ಆಯುಕ್ತರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತು. ರಾಜ್ಯದಲ್ಲಿ ಬಾಕಿ ಇದ್ದ 55 ಸಾವಿರ ಪ್ರಕರಣಗಳಲ್ಲಿ 20 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿ, ಪ್ರಸ್ತುತ 35 ಸಾವಿರ ಪ್ರಕರಣಗಳು ಬಾಕಿಯಿವೆ ಎಂದರು.
ಇನ್ನೋರ್ವ ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಎಸ್.ರಾಜಶೇಖರ್ ಮಾತನಾಡಿ, ಎಲ್ಲ ಅಧಿಕಾರಿ ಸಿಬ್ಬಂದಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂಪೂರ್ಣ ಅರಿವು ಹೊಂದಿದ್ದಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಲು ಅನುಕೂಲವಾಗುತ್ತದೆ. ಯಾವುದೇ ಅಧಿಕಾರಿ ಸಿಬ್ಬಂದಿ ವೈಯಕ್ತಿಕ ಮಾಹಿತಿ ನೀಡಲು ಬರುವುದಿಲ್ಲ. ಮಾಹಿತಿ ಕೋರಿ ಬಂದಂತಹ ಅರ್ಜಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದಲ್ಲಿ ಅಂತಹ ಅರ್ಜಿಗಳಿಗೆ ಮಾಹಿತಿ ನೀಡಬೇಕು ಎಂದರು.
ಬಾಕ್ಸ್ : ರಾಜ್ಯ ಸರ್ಕಾರ ರಾಜ್ಯದ ನಾನಾ ಪೀಠಗಳಿಗೆ ಮಾಹಿತಿ ಆಯೋಗದ ಆರು ಆಯುಕ್ತರು ನೇಮಕಗೊಂಡ ಒಂಬತ್ತು ತಿಂಗಳಲ್ಲೇ 23 ಸಾವಿರ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನೂ 23 ಸಾವಿರ ಅರ್ಜಿಗಳು ಬಾಕಿಯಿವೆ. ಇದರಲ್ಲಿ ಬೆಳಗಾವಿ ಪೀಠದಲ್ಲಿ ಹತ್ತು ಸಾವಿರ, ಕಲಬುರಗಿ ಪೀಠದಲ್ಲಿ ಆರು ಸಾವಿರ ಹಾಗೂ ಉಳಿದಂತೆ ಬೆಂಗಳೂರು ಪೀಠದಲ್ಲಿ ಅರ್ಜಿಗಳು ಬಾಕಿಯಿವೆ. ಬೆಳಗಾವಿ ಹಾಗೂ ಕಲಬುರಗಿ ಪೀಠದಲ್ಲಿನ ಅರ್ಜಿಗಳ ವಿಲೇವಾರಿಗೆ ಆಯುಕ್ತರಾದ ಸಿ.ರಾಜಶೇಖರ, ರುದ್ರಣ್ಣ ಹರ್ತಿಕೋಟೆ ಅವರನ್ನು ನೇಮಿಸಲಾಗಿದೆ. ಈಗಾಗಲೇ ರಾಜ್ಯದ 20 ಜಿಲ್ಲೆಗಳಲ್ಲಿ ಕಾರ್ಯಾಗಾರ ಆಯೋಜಿಸಿದ್ದ ಉಳಿದ ಜಿಲ್ಲೆಗಳಲ್ಲಿ ಕೆಲ ದಿನಗಳಲ್ಲಿ ನೆಡಸಲಾಗುವುದು. ರಾಜ್ಯ ಸರ್ಕಾರ ಆರ್‌ಟಿಐ ಕಾಯ್ದೆಯನ್ನು ಪಟ್ಟಿಯಲ್ಲಿ ಸೇರಿಸಬೇಕು. ತ್ವರಿತಗತಿಯಲ್ಲಿ ಅರ್ಜಿಗಳ ವಿಲೇವಾರಿಗಾಗಿ ಪ್ರತಿ ಕೆಡಿಪಿ ಸಭೆಯಲ್ಲಿಯೂ ಮಾಹಿತಿ ಹಕ್ಕು ಕಾಯ್ದೆ ಕುರಿತು ವಿಷಯ ಅಳವಡಿಸಬೇಕು ಎಂಬುದಾಗಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ದಂಡ ವಿಧಿಸಿದ ಅಧಿಕಾರಿ ಪಾವತಿ ವಿಳಂಬವಾದರೆ ನಿವೃತ್ತಿ ನಂತರ ಸೌಲಭ್ಯ ಕಡಿತವಾಗಲಿದೆ ಎಂಬುದು ಮನವರಿಕೆ ಮಾಡಿಕೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net