ಕೌಶಲ ಶಿಕ್ಷಣಕ್ಕೆ ಒತ್ತು ನೀಡಿ

ಬಳ್ಳಾರಿಯ ಬಿಪಿಎಸ್‌ಸಿ ಶಾಲೆಯಲ್ಲಿ ಆಯೋಜಿಸಿದ್ದ 20ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಉದ್ಘಾಟಿಸಿದರು. ಕುಲಪತಿ ಪ್ರೊ.ಟಿ.ಎನ್.ನಾಗಭೂಷಣ, ಮಕ್ಕಳ ತಜ್ಞ ಡಾ.ಯೋಗಾನಂದರೆಡ್ಡಿ , ಟಿಇಎಚ್‌ಆರ್‌ಡಿ ಟ್ರಸ್ಟಿ ಡಾ.ಯಶವಂತ್ ಭೂಪಾಲ್ ಇದ್ದರು.
ಬಳ್ಳಾರಿಯ ಬಿಪಿಎಸ್‌ಸಿ ಶಾಲೆಯಲ್ಲಿ ಆಯೋಜಿಸಿದ್ದ 20ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಉದ್ಘಾಟಿಸಿದರು. ಕುಲಪತಿ ಪ್ರೊ.ಟಿ.ಎನ್.ನಾಗಭೂಷಣ, ಮಕ್ಕಳ ತಜ್ಞ ಡಾ.ಯೋಗಾನಂದರೆಡ್ಡಿ , ಟಿಇಎಚ್‌ಆರ್‌ಡಿ ಟ್ರಸ್ಟಿ ಡಾ.ಯಶವಂತ್ ಭೂಪಾಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವವಿದ್ಯಾಲಯ
ಬಳ್ಳಾರಿ : ಕೌಶಲಧಾರಿತ ಶಿಕ್ಷಣ ಮಹತ್ವ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ನಿಜವಾದ ಜ್ಞಾನ ಪಡೆಯಬಹುದು ಎಂದು ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎನ್.ನಾಗಭೂಷಣ ಹೇಳಿದರು.
ನಗರದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಆಂಡ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 20ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ವಿದ್ಯೆಯ ಮಹತ್ವ ಹಾಗೂ ತಮ್ಮಲ್ಲಿರುವ ಕೌಶಲ ಪ್ರತಿಭೆ ಅರಿತು ಆದರ್ಶ ಜೀವನ ನಡೆಸಬೇಕು ಎಂದರು.
ಮಕ್ಕಳ ತಜ್ಞ ಡಾ.ಯೋಗಾನಂದರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಬಸವರಾಜೇಶ್ವರಿ ಸಂಸ್ಥೆಗಳಿಂದ ಶೈಕ್ಷಣಿಕ ಕ್ರಾಂತಿಯಾಗಿದೆ. ವಿದ್ಯಾರ್ಥಿಗಳು ಆರೋಗ್ಯ ಸಹಿತ ಆದರ್ಶ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಮಾತನಾಡಿ, ಜಿಲ್ಲೆಯ ಮಕ್ಕಳು ಅಂಗ್ಲ ಮಾಧ್ಯಮದ ಐಸಿಎಸ್‌ಇ ಪಠ್ಯಕ್ರಮ ಓದಲು ಮೊದಲು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆಯಿತ್ತು. ಆ ಕಷ್ಟ ಅರಿತ ನಮ್ಮ ತಾಯಿಯು ತೆಗೆದುಕೊಂಡ ದೃಢ ನಿರ್ಧಾರದಿಂದ ಬಿಪಿಎಸ್‌ಸಿ ಶಾಲೆ ನಿರ್ಮಾಣವಾಗಿ ಬೃಹತ್ ಹೆಮ್ಮರವಾಗಿ ಬೆಳೆದಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಶೇ. 95% ಅಂಕ ಗಳಿಸಿದ ವಿದ್ಯಾರ್ಥಿ ಎಂ.ಯಶವಂತ್‌ಗೆ ಅಕಾಡೆಮಿಕ್ ಎಕ್ಸ್‌ಲೆನ್ಸ್ ಪಾರಿತೋಷಕ ನೀಡಿ ಗೌರವಿಸಲಾಯಿತು. ಕಳೆದ ವರ್ಷ ಶಾಲೆಯ ವಾರ್ಷಿಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ತರಗತಿವಾರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ನಡೆದವು. ದಶವಾತಾರ ಎಂಬ ವಿಷಯದ ಆಧಾರದ ಮೇಲೆ ಭಗವಂತನ ಹತ್ತು ಅವತಾರಾಗಳಾದ ಮತ್ಸೃ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಗೌತಮ ಬುದ್ಧ ಹಾಗೂ ಕಲ್ಕಿ ಒಳಗೊಂಡ ಅದ್ಬುತ ನೃತ್ಯ ಪ್ರದರ್ಶಿಸಲಾಯಿತು. ಈ ಬಾರಿ ಕನ್ನಡದ ಚಲನಚಿತ್ರ ರಂಗದ ಹಳೆಯ ಚಲನಚಿತ್ರ ಗೀತೆಗಳಿಗೆ ಮಕ್ಕಳು ತಮ್ಮ ಹಾವ ಭಾವದ ಮೂಲಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net