ಮಾನವೀಯತೆ ಸಮಾನತೆ ಸಾರಿದವರು

ಸಿರಿಗೇರಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಿಂದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ, ಕೆಕೆಆರ್‌ಟಿಸಿ ಸಿಬ್ಬಂದಿ ಹನುಮಂತಪ್ಪ, ವೇದಮೂರ್ತಿ, ಸಿ.ಎಂ.ಸಿದ್ದಯ್ಯ ಸ್ವಾಮಿ, ಗ್ರಾಮಸ್ಥರಾದ ವಿ.ರೇಣುಕಪ್ಪ, ಬಿ.ಸೋಮಶೇಖರಪ್ಪ, ಕರಿಬಸಪ್ಪ, ನಾಗರಾಜ, ಮಲ್ಲಿಕಾರ್ಜುನ ಇತರರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಮಾನತೆ
ಬಳ್ಳಾರಿ : ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಗೌರವಯುತವಾಗಿ ಬಾಳಿ ಬದುಕುವ ಹಕ್ಕನ್ನು ಪ್ರತಿಪಾದಿಸಿ ಮಾನವೀಯ ಸಮಾನತೆ ಎತ್ತಿ ಹಿಡಿದವರು ಎಂದು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ ಹೇಳಿದರು.
ಗ್ರಾಮದ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಿಂದ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೀನ ದಲಿತರ ಹಾಗೂ ನಿರ್ಗತಿಕರ ಬದುಕಿಗೆ ದಾರಿದೀಪ ನೀಡಿದವರು. ಬಾಬಾ ಸಾಹೇಬ್ ಅವರ ಚಿಂತನೆ ಬದುಕಿನ ಹೋರಾಟ ಅವರ ವಿಚಾರಧಾರೆಗಳು ಶೋಷಿತರ ಪರವಾದ ನಿಲುವು ಮಹಿಳೆಯರ ಬದುಕಿಗೆ ಅವರು ನೀಡಿದ ಕೊಡುಗೆ ಅಸ್ಪಶ್ಯತೆ ನಿವಾರಣೆ, ಮಹತ್ತರವಾದದ್ದು. ಭಾರತದ ಸಂವಿಧಾನದಲ್ಲಿ ಅವರ ಕೊಡುಗೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
=====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net