ಕುರುಗೋಡಿನಲ್ಲಿ 1.50 ಲಕ್ಷ ರೂ. ಮೌಲ್ಯದ ಕಾಪರ್ ವೈರ್, 4.50 ಲಕ್ಷ ರೂ. ಮೌಲ್ಯದ ಒಂಬತ್ತು ಎಮ್ಮೆಗಳು ಹಾಗೂ 3.80 ಲಕ್ಷ ರೂ. ಮೌಲ್ಯದ ನಾಲ್ಕು ಬೈಕ್‌ಗಳು ವಶಪಡೆಯಲಾಗಿದೆ. ಕುಡುತಿನಿ ಪಟ್ಟಣದಲ್ಲಿ 2.20 ಲಕ್ಷ ರೂ. ಮೌಲ್ಯದ ಲಾರಿಯ ಹತ್ತು ಟೈರ್ ಹಾಗೂ ನಾಲ್ಕು ಡಿಸ್ಕ್‌ಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕುರುಗೋಡು ಹಾಗೂ ಕುಡುತಿನಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ನಗರದಲ್ಲಿ ಮಾದಕ ದ್ರವ್ಯ ಸೇವನೆ ಪತ್ತೆ ಹಚ್ಚುವ ಸಂಬಂಧ 766 ಜನರನ್ನು ಪರಿಶೀಲಿಸಿದ್ದು, ಈ ಪೈಕಿ ಇಬ್ಬರನ್ನು ನವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ದ್ಯವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.