ಲಕ್ಷಣಕ್ಕಿಂತ ಶಿಕ್ಷಣ ಮುಖ್ಯ

ಎಮ್ಮಿಗನೂರಿನಲ್ಲಿ ಸಾಮೂಹಿಕ ಶ್ರೀ ಶಾರದಾದೇವಿ ಪೂಜೆ, ಅಕ್ಷರಾಭ್ಯಾಸ, ಧಾರ್ಮಿಕ ಸಮಾರಂಭವನ್ನು ಶಾಸಕ ಜೆ.ಎನ್.ಗಣೇಶ್ ಉದ್ಘಾಟಿಸಿದರು.
ಎಮ್ಮಿಗನೂರಿನಲ್ಲಿ ಸಾಮೂಹಿಕ ಶ್ರೀ ಶಾರದಾದೇವಿ ಪೂಜೆ, ಅಕ್ಷರಾಭ್ಯಾಸ, ಧಾರ್ಮಿಕ ಸಮಾರಂಭವನ್ನು ಶಾಸಕ ಜೆ.ಎನ್.ಗಣೇಶ್ ಉದ್ಘಾಟಿಸಿದರು.
Published on
ಕಂಪ್ಲಿ: ಸೌಂದರ್ಯ ಕಳೆಗುಂದಬಹುದು. ಆದರೆ, ಶಿಕ್ಷಣ ಕಳೆದುಹೋಗುವುದಿಲ್ಲ. ಲಕ್ಷಣಕ್ಕಿಂತ ಶಿಕ್ಷಣ ಮುಖ್ಯ ಎಂದು ಎಮ್ಮಿಗನೂರಿನ ಹಂಪಿಸಾವಿರ ದೇವರ ಮಠದ ಶ್ರೀ ವಾಮದೇವ ಶಿವಾಚಾರ್ಯರು ಹೇಳಿದರು.
ಎಮ್ಮಿಗನೂರಿನ ಶ್ರೀ ಜಡೇಸಿದ್ಧ ಶಿವಯೋಗಿಗಳ ಮಠದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಶಾರದಾದೇವಿ ಪೂಜೆ, ಅಕ್ಷರಾಭ್ಯಾಸ, ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು. ಮಕ್ಕಳಿಗೆ ಸುವರ್ಣ ಮಾಲೆ ಹಾಕಿದಲ್ಲಿ ಕದಿಯಬಹುದು. ಆದರೆ, ವರ್ಣಮಾಲೆ ಹಾಕಿದಲ್ಲಿ ಯಾರೂ ಕದಿಯಲಾರರು. ಶಿಕ್ಷಣಾರಂಭ ಶೋಡಶ ಸಂಸ್ಕಾರಗಳಲ್ಲಿ ಒಂದಾಗಿದೆ ಎಂದರು.
 ಶಾಸಕ ಜೆ.ಎನ್.ಗಣೇಶ್ ಸಮಾರಂಭಕ್ಕೆ ಚಾಲನೆ ನೀಡಿ, ಮಕ್ಕಳಲ್ಲಿ ಶಿಕ್ಷಣದೊಂದಿಗೆ ಪ್ರಸಕ್ತ ವಿದ್ಯಮಾನಗಳನ್ನು ಅರಿಯುವ ಪ್ರಜ್ಞೆ ಬೆಳೆಸಬೇಕಿದೆ. ಶಿಕ್ಷಣದೊಂದಿಗೆ ಧಾರ್ಮಿಕ, ಆಧ್ಯಾತ್ಮಿಕ ಮನೋಭಾವನೆ ಅಳವಡಿಸಿಕೊಳ್ಳುವಲ್ಲಿ ಮಕ್ಕಳು ಮುಂದಾಗಬೇಕಿದೆ ಎಂದರು.  
ಶಾರದಾದೇವಿ ಪೂಜಾ ಸಮಿತಿ ಅಧ್ಯಕ್ಷ ಕನಕಪ್ಪ ಸುಣಗಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಚ್.ವೀರಾಪುರದ ಶ್ರೀ ಜಡೇಶ ತಾತ, ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ತಾಲೂಕು ಯೋಜನಾಧಿಕಾರಿ ಎಲ್.ರಾಘವೇಂದ್ರ, ಗ್ರಾಪಂ ಅಧ್ಯಕ್ಷೆ ಎಚ್.ಜೆ.ಶಾರದಾ  ಜಡೆಮೂರ್ತಿ, ಪ್ರಮುಖರಾದ ಕಿರಣರಾಮಜೀ, ಜಯಮ್ಮ ರಾಮಾಂಜನೇಯಲು, ಬಿ.ಸದಾಶಿವಪ್ಪ, ಕೆ.ಶ್ರೀನಿವಾಸರಾವ್, ಎಂ.ಸುಧೀರ್, ಗಾದ್ಲಿ ನಾಗರೆಡ್ಡಿ, ಅಕ್ಷರಾಭ್ಯಾಸ ಸಮಿತಿ ಪದಾಧಿಕಾರಿಗಳಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net