ವಿದ್ಯುತ್ ಖಾಸಗೀಕರಣದಿಂದ ಆರ್ಥಿಕ ಹೊರೆ

ವಿದ್ಯುತ್ ವಲಯದ ಖಾಸಗೀಕರಣ ಪ್ರಕ್ರಿಯೆ ವಿರೋಧಿಸಿ ಕೊಟ್ಟೂರಿನ ಜೆಸ್ಕಾಂ ಕಚೇರಿ ಮುಂದೆ ಜೆಸ್ಕಾಂ ನೌಕರರ ಸಂಘ ಮತ್ತು ಗುತ್ತಿಗೆದಾರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಜೆಸ್ಕಾಂ ಗುತ್ತಿಗೆದಾರ ಸಂಘದ ತಾಲೂಕು ಅಧ್ಯಕ್ಷ ಹೇಮಂತ, ನೌಕರರ ಸಂಘದ ಅಧ್ಯಕ್ಷ ಮಂಜುನಾಥ, ಜೆಇಗಳಾದ ತಿಪ್ಪೇಶ, ನಾಗರಾಜ್, ಲೈನ್‌ಮನ್ ನಂಜಪ್ಪ, ಕಾಮಗಾರಿ ವಿಭಾಗದ ಅಶೋಕ, ಶಾಖಾಧಿಕಾರಿಗಳಾದ ಶರಣಪ್ಪ, ಚೇತನಕುಮಾರ್ ಸಿಬ್ಬಂದಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜೆಸ್ಕಾಂ ಗುತ್ತಿಗೆದಾರರ ತಾಲೂಕು ಅಧ್ಯಕ್ಷ ಹೇಮಂತ
  • ಕೊಟ್ಟೂರು ಜೆಸ್ಕಾಂ ನೌಕರರು-ಗುತ್ತಿಗೆದಾರರ ಪ್ರತಿಭಟನೆ
ಕೊಟ್ಟೂರು: ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವುದರಿಂದ ಜನಸಾಮಾನ್ಯರಿಗೆ ಅನ್ಯಾಯವಾಗಲಿದೆ ಎಂದು ಜೆಸ್ಕಾಂ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಹೇಮಂತ ಹೇಳಿದರು.
ಖಾಸಗೀಕರಣ ಪ್ರಕ್ರಿಯೆಗೆ ವಿರೋಧಿಸಿ ಪಟ್ಟಣದ ಜೆಸ್ಕಾಂ ಕಚೇರಿ ಮುಂದೆ ಜೆಸ್ಕಾಂ ನೌಕರರ ಸಂಘ ಮತ್ತು ಗುತ್ತಿಗೆದಾರರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಖಾಸಗೀಕರಣದಿಂದ ನೌಕರರು ಉದ್ಯೋಗ ಭದ್ರತೆ ಕಳೆದುಕೊಳ್ಳಬೇಕಾಗುತ್ತದೆ. ಗಂಗಾ ಕಲ್ಯಾಣ, ಕುಟೀರ ಜ್ಯೋತಿ, ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವ ಎಲ್ಲ ಯೋಜನೆಗಳು ರದ್ದಾಗಲಿವೆ ಎಂದರು.
ವಿದ್ಯುತ್ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಸಲಿದ್ದು, ಚಾರ್ಜ್ ಮಾಡಲು ಹಣ ಸಂದಾಯ ಮಾಡಬೇಕು. ಹೆಚ್ಚು ವಿದ್ಯುತ್ ಬಳಸಿದರೆ ಪುನಃ ಚಾರ್ಜ್ ಮಾಡಿಸಬೇಕು. ಇದರಿಂದ ಕೃಷಿ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ. ಖಾಸಗೀಕರಣ ವಿದ್ಯುತ್ ನಿಗಮದ ಅಳಿವು ಉಳಿವಿನ ಬಗ್ಗೆ ಇದೇ ತಿಂಗಳು 23ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ರೈತರು ಖಾಸಗೀಕರಣ ವಿರೋಧಿಸಿ ತ್ವರಿತವಾಗಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಜೆಸ್ಕಾಂ ಎಇಇ ಆರ್.ನಾಗರಾಜ್ ಮಾತನಾಡಿ, 10 ಸಾವಿರ ಮೀಟರ್‌ಗೆ ಒಬ್ಬ ಲೈನ್‌ಮನ್ ಇರುತ್ತಾನೆ. ಇದರಿಂದ ಗ್ರಾಹಕರ ದಿಢೀರ್ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹೆಚ್ಚುವರಿ ನೌಕರರನ್ನು ನೇಮಕ ಮಾಡುವುದಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಉಲ್ಬಣವಾಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net