ಬಾಕ್ಸ್ : ಕೆಕೆಆರ್‌ಡಿಬಿ ಅನುದಾನದ 42.94 ಕೋಟಿ ರೂ. ದಲ್ಲಿ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್‌ಎಸ್‌ಎಂ) ಸಾಫ್ಟ್‌ವೇರ್ ಆ್ಯಪ್ ಆಪ್‌ಡೇಟ್‌ಗಾಗಿ 9.50 ಕೋಟಿ ರೂ., ವಿಭಾಗಗಳ ಪೀಠೋಪಕರಣಗಳ ಅಳವಡಿಕೆಗೆ 9.20 ಕೋಟಿ ರೂ., 500 ಕಿ.ವ್ಯಾ. ಸೋಲಾರ್ ಸಿಸ್ಟ್‌ಂಗೆ 5.44 ಕೋಟಿ ರೂ., ವಿಜ್ಞಾನ ವಿಭಾಗಕ್ಕೆ ಅತ್ಯಾಧುನಿಕ ಸೌಲಭ್ಯಕ್ಕೆ 9.40 ಕೋಟಿ ರೂ., ಡಿಜಿಟಿಲ್ ಗ್ರಂಥಾಲಯ ಹಾಗೂ ಬೋರ್ಡ್‌ಗಳ ಅಳವಡಿಕೆಗೆ 9.40 ಕೋಟಿ ರೂ. ಟೆಂಡರ್‌ನಲ್ಲಿ ಮೀಸಲಿಡಲು ಉದ್ದೇಶಿಸಿದೆ. ಇದರಲ್ಲಿ ಉದಾಹರಣೆಗೆ ಸಾಮಾನ್ಯವಾಗಿ ಒಂದು ಕಿಲೋ ವ್ಯಾಟ್‌ಗೆ 35 ಸಾವಿರ ರೂ. ಬೆಲೆಯಿದ್ದು, ಅದರಂತೆ 500 ಕಿ.ವ್ಯಾ.ಗೆ 1.75 ಕೋಟಿ ರೂ. ಅನುದಾನ ವ್ಯಯವಾಗಲಿದೆ. ಆದರೆ, 500 ಕಿ.ವ್ಯಾನ ಸೋಲಾರ್ ಸಿಸ್ಟ್‌ಂಗಾಗಿಯೇ 5.44 ಕೋಟಿ ರೂ. ಮೀಸಲಿಟ್ಟಿದೆ. ಸಾಫ್ಟ್‌ವೇರ್ ಎಲ್‌ಎಸ್‌ಎಂ ಆಪ್‌ಡೇಟ್ ಒಂದು ಕೋಟಿ ರೂ. ದೊರೆಯುವುದಕ್ಕೆ ಒಂಬತ್ತು ಕೋಟಿ ರೂ. ಮೀಸಲಿಡಲಾಗಿದೆ ಎನ್ನಲಾಗಿದೆ. ಇದಲ್ಲದೇ, ಹೆಚ್ಚಿನ ಬೆಲೆಯಿರುವ ಕಂಪನಿಗಳ ಮೂಲಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಿರುವುದರಿಂದ ಒಪನ್ ಟೆಂಡರ್ ಕರೆಯದೆ ವಿಳಂಬ ಮಾಡುತ್ತಿದ್ದಾರೆ ಎಂದು ವಿವಿಯ ಸಿಬ್ಬಂದಿ ತಿಳಿಸಿದರು.