ನರೇಗಾ ಕೆಲಸಕ್ಕೆ ಇ ಕೆವೈಸಿ ಕಡ್ಡಾಯ

ಸಿರಗುಪ್ಪ ತಾಲೂಕಿನ ಬಗ್ಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಗರ ಕ್ಯಾಂಪಿನಲ್ಲಿ ನಾಲಾ ಹೂಳೆತ್ತುವ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮನೋಹರ್ ಪರಿಶೀಲಿಸಿದರು.
ಸಿರಗುಪ್ಪ ತಾಲೂಕಿನ ಬಗ್ಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಗರ ಕ್ಯಾಂಪಿನಲ್ಲಿ ನಾಲಾ ಹೂಳೆತ್ತುವ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮನೋಹರ್ ಪರಿಶೀಲಿಸಿದರು.
Published on
ಸಿರಗುಪ್ಪ: ಗ್ರಾಮೀಣ ಬಡವರ ಜೀವನೋಪಾಯ ಬಲಪಡಿಸಲು ಮತ್ತು ಶಾಶ್ವತ ಆಸ್ತಿಗಳನ್ನು ಸೃಷ್ಟಿಸಲು ನರೇಗಾ ಯೋಜನೆ ಸಹಾಯ ಮಾಡುತ್ತದೆ ಎಂದು ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮನೋಹರ್ ಹೇಳಿದರು.
ಬಗ್ಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀನಗರ ಕ್ಯಾಂಪಿನಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಮಂಗಳವಾರ ಮಾತನಾಡಿದರು. ನರೇಗಾ ಕೆಲಸಕ್ಕೆ ಇ ಕೆವೈಸಿ ಕಡ್ಡಾಯವಾಗಿರಬೇಕು. ಪ್ರತಿದಿನ ಎನ್‌ಎಂಆರ್‌ನಲ್ಲಿರುವ ಕೂಲಿ ಕಾರ್ಮಿಕರ ಭಾವಚಿತ್ರವನ್ನು ಪ್ರತ್ಯೇಕವಾಗಿ ಸೆರೆ ಹಿಡಿಯಬೇಕು. ನಾಲ್ಕು ಗಂಟೆ ನಂತರ ಗ್ರೂಪ್ ಫೋಟೋ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಎರಡನೇ ಫೋಟೋ ತೆಗೆಯುವ ಸಮಯದಲ್ಲಿ ಕೂಲಿ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಹಾಜರಿಲ್ಲದಿದ್ದರೆ ಆ ಕೂಲಿ ಕಾರ್ಮಿಕರಿಗೆ ಕೂಲಿ ಮೊತ್ತ ಪಾವತಿಯಾಗುವುದಿಲ್ಲ. ಅಳತೆ ಪ್ರಕಾರ ಕೆಲಸ ಮಾಡಿದರೆ ಮಾತ್ರ ಪೂರ್ಣ ಮೊತ್ತ ಬರುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net