

ಪ್ರಮುಖ ಮುಖ್ಯಾಂಶಗಳು
ಕಂಪ್ಲಿ: ಗ್ರಾಮದೇವತೆ ದ್ಯಾವಮ್ಮ ಹಾಗೂ ಹುಲಿಗೆಮ್ಮ ದೇವತೆಗಳ ಗಂಗೆಸ್ಥಳ ಮೆರವಣಿಗೆ ಮಂಗಳವಾರ ಜನಪದ ವಾದ್ಯಮೇಳದೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ದೇವತೆಗಳ ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ಉಡಿ ತುಂಬುವುದು, ಅನ್ನಸಂತರ್ಪಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಭಕ್ತರು ನೈವೇದ್ಯ ಅರ್ಪಿಸಿ ಭಕ್ತಿ ಸಲ್ಲಿಸಿದರು.
ದೇವಸ್ಥಾನಗಳ ಸಮಿತಿ ಗೌರವಾಧ್ಯಕ್ಷರಾದ ಶೆರೆಗಾರ ನಾಗರಾಜ, ಕಂಬತ್ ಕೃಷ್ಣ, ಕಟ್ಟೆ ಸಣ್ಣದುರುಗಪ್ಪ, ಅಧ್ಯಕ್ಷ ಅದ್ದಪ್ಪ ತಿಮ್ಮಪ್ಪ, ಪದಾಧಿಕಾರಿಗಳಾದ ಕಂಬತ್ ರಮೇಶ್, ಕಟ್ಟೆ ವೀರೇಶ, ಶೆರೆಗಾರ ಕೃಷ್ಣ, ಕೆ.ನಾಗರಾಜ, ಬಿ.ರಮೇಶ, ಬಿ.ಮಂಜುನಾಥ ಇತರರಿದ್ದರು.