ದಾಖಲೆಗಳಿಲ್ಲದ ಚಾಲನೆ ಕಾನೂನು ಬಾಹಿರ

ಸಂಡೂರಿನ ಆಶ್ರಯ ಕಾಲನಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪಿಎಸ್‌ಐ ಡಾಕೇಶ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಆದಿಜಾಂಬವ ಮಹಾಸಭಾದ ಅಧ್ಯಕ್ಷ ನಿಂಗಪ್ಪ ಐಹೊಳೆ, ಪಿಆರ್‌ಕೆ ಸೇವಾ ಟ್ರಸ್ಟ್ ಸಂಸ್ಥಾಪಕ ಎಸ್.ಪಿ.ಶಶಿಕಿರಣ್, ಮಲ್ಲೇಶ ಕಮ್ಮತ್ತೂರು, ಬಾಬುಸಾಬ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾನೂನು ಬಾಹಿರ

ದಾಖಲೆಗಳಿಲ್ಲದ ಚಾಲನೆ ಕಾನೂನು ಬಾಹಿರ

ಸಂಡೂರು: ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಬೈಕ್ ಓಡಿಸಲು ಕೊಟ್ಟರೆ ನ್ಯಾಯಾಲಯದಲ್ಲಿ ಪಾಲಕರು ದಂಢ ತೆರಬೇಕಾಗುತ್ತದೆ ಎಂದು ಪಿಎಸ್‌ಐ ಡಾಕೇಶ್ ನಾಯ್ಕ ಹೇಳಿದರು.
ನಗರದ ಪುನೀತ್ ರಾಜಕುಮಾರ್ ಸೇವಾ ಟ್ರಸ್ಟ್‌ವತಿಯಿಂದ ಆಶ್ರಯ ಕಾಲನಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು 3-4 ಜನ ಸೇರಿ ಬೈಕ್ ಓಡಿಸುತ್ತಿರುವುದು ಹಾಗೂ ಸೈಲೆನ್ಸ್‌ರ್ ಬಿಚ್ಚಿ ಓಡಿಸುತ್ತಿರುವುದಾಗಿ ಕೇಳಿ ಬಂದಿದೆ.
ಹೆಲ್ಮೆಟ್ ಧರಿಸದೆ ಚಾಲನೆ ಮಾಡುವುದು, ದಾಖಲೆಗಳಿಲ್ಲದೆ ರಸ್ತೆಯಲ್ಲಿ ಸಂಚರಿಸುವುದು ಕಾನೂನು ಬಾಹಿರ. ಪೋಕ್ಸೊ ಕಾಯ್ದೆ ಬಗ್ಗೆ ಎಚ್ಚರ ವಹಿಸಬೇಕು. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಬಾಲ ಕಾರ್ಮಿಕರಿಗೆ ಕೆಲಸ ಕೊಡುವ ಮತ್ತು ಕೆಲಸಕ್ಕೆ ಕಳಿಸುವ ಪಾಲಕರಿಗೂ ಶಿಕ್ಷೆ ಆಗಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net