ಕಳೆದ ಮೂವತ್ತು ವರ್ಷಗಳ ಹಿಂದೆ ಸಿಮೆಂಟ್ ಪೈಪ್ ನೆಲದಲ್ಲಿ ಅಳವಡಿಸಲಾಗಿದೆ. ನೀರು ಸರಬರಾಜು ವೇಳೆ ಗಾಳಿ ಸ್ಟ್ರಕ್‌ಗೊಂಡ ಪರಿಣಾಮ ನೀರಿನ ರಭಸಕ್ಕೆ ಪೈಪ್ ಹೊಡೆದಿದೆ ಎನ್ನಲಾಗಿದೆ. ಇದರಿಂದ ಕೆಲ ಕಾಲ ವಾಹನ ಸವಾರರು ರಸ್ತೆಯ ಮೇಲೆ ಹರಿಯುವ ನೀರಿನಲ್ಲಿ ಸಂಚರಿಸಿದರು. ಪಾಲಿಕೆಯ ಅಧಿಕಾರಿಗಳು ಕೂಡಲೇ ನೀರು ಸ್ಥಗಿತಗೊಳಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರು. ಶನಿವಾರ ರಸ್ತೆ ತಡೆದು ಹೊಸ ಪೈಪ್ ಅಳವಡಿಸಿ, ನೀರು ಸರಬರಾಜು ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ತಿಳಿಸಿದರು.