ಶುದ್ಧೀಕರಿಸಿದ ನೀರು ಕುಡಿಯಿರಿ

ಸಿರಿಗೇರಿ ಸಮೀಪದ ಮುದ್ದಟನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಶುದ್ಧ ಜಲ ಅಭಿಯಾನದ ಕಾರ್ಯಕ್ರಮವನ್ನು ಶಿಕ್ಷಕ ಉಮೇಶ ಉದ್ಘಾಟಿಸಿದರು.
ಸಿರಿಗೇರಿ ಸಮೀಪದ ಮುದ್ದಟನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಶುದ್ಧ ಜಲ ಅಭಿಯಾನದ ಕಾರ್ಯಕ್ರಮವನ್ನು ಶಿಕ್ಷಕ ಉಮೇಶ ಉದ್ಘಾಟಿಸಿದರು.
Published on
ಸಿರಿಗೇರಿ: ನೀರನ್ನು ಅನಗತ್ಯ ವ್ಯಯ ಮಾಡದೆ ಹಿತಮಿತವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕೆಂದು ಶಿಕ್ಷಕ ಉಮೇಶ ತಿಳಿಸಿದರು.
ಮುದ್ದಟನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶುದ್ಧಗಂಗಾ ಜಲ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ನೀರಿನಲ್ಲಿ ರಾಸಾಯನಿಕ ಪದಾರ್ಥಗಳ ಕಲಬೆರಕೆ ಆಗಿರುವುದರಿಂದ ಶುದ್ಧೀಕರಿಸಿದ ನೀರನ್ನು ಕುಡಿಯಬೇಕು. ಧರ್ಮಸ್ಥಳ ಸಂಸ್ಥೆಯ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯದೊಂದಿಗೆ ಅಭಿವೃದ್ಧಿ ಆಗಬೇಕು ಎಂದರು.
ಶುದ್ಧಗಂಗಾ ಯೋಜನೆ ಮೇಲ್ವಿಚಾರಕ ಶಿವಾನಂದ ಅಕ್ಕಿ ಮಾತನಾಡಿ, ಶುದ್ಧ ನೀರಿನ ಸೇವನೆಯಿಂದ ನಮ್ಮ ಆರೋಗ್ಯ ಬಲವರ್ಧನೆ ಆಗುತ್ತದೆ ನಾವು ಆರೋಗ್ಯವಾಗಿದ್ದರೆ ನಮ್ಮ ಕುಟುಂಬದ ರಕ್ಷಣೆ ಮಾಡಬಹುದು. ಈ ಮೂಲಕ ನಮ್ಮ ಕುಟುಂಬ ಆರ್ಥಿಕವಾಗಿಯೂ ಸಬಲೀಕರಣ ಆಗುತ್ತದೆ. ಕಲುಷಿತ ನೀರು ಸೇವನೆಯಿಂದ ನಮಗೆ ರೋಗ-ರುಜಿನಗಳು ಬರುತ್ತವೆ. ಇದರಿಂದ ನಮ್ಮ ಕುಟುಂಬಗಳಿಗೆ ಆರ್ಥಿಕ ಹೊರೆ ಬೀಳುತ್ತದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಶಿಕ್ಷಕರಾದ ಮುದುಕಪ್ಪ, ಮಹಮ್ಮದ್ ರಫಿ, ಚಿದಾನಂದ, ಶೋಭಾ, ಶಿವಕುಮಾರ, ಪ್ರಮುಖ ಶಿವರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net