ಹೆಲ್ಮೆಟ್ ಬಗ್ಗೆ ನಿರ್ಲಕ್ಷ್ಯ ಸಲ್ಲ

ಕುರುಗೋಡಿನಲ್ಲಿ ಪೊಲೀಸ್ ಇಲಾಖೆಯಿಂದ ಹೆಲೈಟ್ ಜಾಗೃತಿ ಜಾಥಾ ನಡೆಸಲಾಯಿತು.
ಕುರುಗೋಡಿನಲ್ಲಿ ಪೊಲೀಸ್ ಇಲಾಖೆಯಿಂದ ಹೆಲೈಟ್ ಜಾಗೃತಿ ಜಾಥಾ ನಡೆಸಲಾಯಿತು.
Published on
ಕುರುಗೋಡು: ಜೀವವಿಲ್ಲದ ಮೊಬೈಲ್ ಫೋನ್‌ಗೆ ಸ್ಕ್ರೀನ್‌ಗಾರ್ಡ್ ಹಾಕಿಸಿ ಸುರಕ್ಷಿತವಾಗಿ ಕಾಪಾಡುತ್ತೇವೆ. ಆದರೆ ನಮ್ಮ ಅಮೂಲ್ಯ ಜೀವ ಕಾಪಾಡುವ ಹೆಲ್ಮೆಟ್ ಬಳಸುವುದನ್ನು ಮರೆಯುತ್ತೇವೆ. ಇಂತಹ ನಿರ್ಲಕ್ಷ್ಯ ಒಳಿತಲ್ಲ ಎಂದು ಸಿಪಿಐ ಬಾಳನಗೌಡ ಮಾನಶಟ್ಟಿ ಹೇಳಿದರು.
ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಹೆಲೈಟ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತಂದಿರುವ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ಹಾಗೂ ತಿಳಿವಳಿಕೆ ಇದ್ದರೂ ಸಾರ್ವಜನಿಕರು ಪಾಲಿಸುತ್ತಿಲ್ಲ. ಅಪಘಾತ ತಪ್ಪಿಸಲು ಸವಾರರ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು. ಹೆಲ್ಮೆಟ್ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ತಿಳಿಸಿದರು. ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ಕರೆಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net