ಶಿವಪುರ ತಾಂಡಾದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಗುಳೆ ಹೋಗಬೇಡಿ, ನಿಮ್ಮೂರಲ್ಲೇ ಕೆಲಸ ಮಾಡಿ’ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಜಿಪಂ ಡಿಐಇಸಿ ಸಂಯೋಜಕ ಫಾಜಿಲ್ ಅಹಮದ್ ಹಾಗೂ ತಾಪಂ ಐಇಸಿ ಸಂಯೋಜಕ ಕೆ. ವಸಿಗೇರಪ್ಪ ಚಾಗನೂರು ಸೇರಿದಂತೆ ಗ್ರಾಮಸ್ಥರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗ್ರಾಮೀಣರಿಗೆ ಸ್ವಗ್ರಾಮದಲ್ಲೇ ಉದ್ಯೋಗ ಭದ್ರತೆ
51 ತಾಂಡಗಳ ಫಲಾನುಭವಿಗಳಿಗೆ ಉದ್ಯೋಗ ಚೀಟಿ
ಹರಪನಹಳ್ಳಿ: ಶ್ರಮಿಕ ಕುಟುಂಬಗಳು, ತಾಂಡದ ಜನರು ಹಾಗೂ ಕೂಲಿಕಾರ್ಮಿಕರು ಉದ್ಯೋಗ ಮತ್ತು ಜೀವನೋಪಾಯ ಅರಸಿ ಗುಳೆ ಹೋಗುವುದನ್ನು ಸಂಪೂರ್ಣ ತಡೆಯುವುದು ವಿಬಿಜಿರಾಮ್ ಜಿ ಯೋಜನೆಯ ಮುಖ್ಯ ಉದ್ದೇಶ ಎಂದು ಜಿಪಂ ಡಿಐಇಸಿ ಸಂಯೋಜಕ ಫಾಜಿಲ್ ಅಹಮದ್ ತಿಳಿಸಿದರು.
ಶಿವಪುರ ತಾಂಡದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ ಕಾಯ್ದೆಯ ಐಇಸಿ ಚಟುವಟಿಕೆಯಡಿ ಬುಧವಾರ ಹಮ್ಮಿಕೊಂಡಿದ್ದ ಗುಳೆ ಹೋಗಬೇಡಿ, ನಿಮ್ಮೂರಲ್ಲೇ ಕೆಲಸ ಮಾಡಿ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಸ್ಥಳೀಯವಾಗಿ ಕೆಲಸದ ಅಭಯವಿದ್ದು, ಅಧಿಕೃತ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಗುರುತಿಸಲ್ಪಟ್ಟ ಒಟ್ಟು 51 ತಾಂಡಾಗಳಿವೆ. ಶಿವಪುರ ತಾಂಡಾ ಸೇರಿದಂತೆ ತಾಲೂಕಿನಾದ್ಯಂತ ಇರುವ 51 ತಾಂಡಾಗಳ ಪ್ರತಿಯೊಬ್ಬ ಜಾಬ್ ಕಾರ್ಡ್‌ದಾರರಿಗೂ ಸ್ವಗ್ರಾಮ ಅಥವಾ ತಾಂಡಾಗಳಲ್ಲೇ ಆದ್ಯತೆಯ ಮೇರೆಗೆ ಶೇ.100 ಕೆಲಸ ಒದಗಿಸಲು ತಾಪಂ ಇಒ ಹಾಗೂ ಸಹಾಯಕ ನಿರ್ದೇಶಕರ ನೇತೃತ್ವದ ತಂಡವು ಸಿದ್ಧತೆ ನಡೆಸಿಕೊಂಡಿದೆ ಎಂದು ತಿಳಿಸಿದರು.
ಐಇಸಿ ಸಂಯೋಜಕ ಕೆ. ವಸಿಗೇರಪ್ಪ ಚಾಗನೂರು ಮಾತನಾಡಿ, ಗ್ರಾಮೀಣ ಕುಟುಂಬವು ವರ್ಷದಲ್ಲಿ 125 ದಿನ ಕೆಲಸ ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿದೆ. ನಿಮ್ಮ ಗ್ರಾಮದಲ್ಲಿಯೇ ಲಭ್ಯವಿರುವ ಜಲಸಂರಕ್ಷಣೆ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೆರೆ ಪುನಶ್ಚೇತನ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿ ಆರ್ಥಿಕ ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳಬೇಕೆಂದು ತಿಳಿಸಿದರು.