ಹಾವು ಕಡಿತಕ್ಕೆ ಮೂಢನಂಬಿಕೆ ಪದ್ಧತಿ ಅನುಸರಿಸದಿರಿ

ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಾಯಿ ಹಾಗೂ ಹಾವು ಕಡಿತದ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಾಧಿಕ್ ಅಲಿ ಮಾತನಾಡಿದರು. ಆರೋಗ್ಯ ಕೇಂದ್ರ ಸಿಬ್ಬಂದಿ ಶಿವಲೀಲಾ ಹೊಡೆದ ಮಠ, ಗೀತಮ್ಮ, ಬಸಮ್ಮ, ಅನುಸೂಯಮ್ಮ, ಸತ್ಯವತಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಾಧಿಕ್ ಅಲಿ ಸಲಹೆ
  • ಸಿರಿಗೇರಿ ಹಾವು ಕಡಿತದ ಜಾಗೃತಿ ಕಾರ್ಯಕ್ರಮ
ಸಿರಿಗೇರಿ: ನಾಯಿ, ಬೆಕ್ಕು, ಮಂಗ, ಮುಂತಾದ ಪ್ರಾಣಿಗಳ ಕಡಿತದಿಂದ ರೇಬಿಸ್ ಕಾಯಿಲೆ ಬರುತ್ತದೆ. ಇತ್ತೀಚೆಗೆ ರೇಬಿಸ್ ಕಾಯಿಲೆಗೆ ಹೆಚ್ಚು ಜನರು ತುತ್ತಾಗುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ಕಚ್ಚಿದ ಜಾಗದಲ್ಲಿ ಸಾಬೂನಿನಿಂದ 10 ರಿಂದ 15 ನಿಮಿಷ ತೊಳೆದು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಹೋಗಿ ನಂಜು ನಿರೋಧಕ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಾಧಿಕ್ ಅಲಿ ಹೇಳಿದರು. 
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಿರಿಗೇರಿ-ಬಿ ಉಪ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ವಾನ ಹಾಗೂ ಹಾವು ಕಡಿತದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಿಶಿಣ ಪುಡಿ ಹಚ್ಚುವುದು, ಎಲೆ ಹಿಂಡುವುದು, ದಾರ ಸುಡುವುದು ಸೇರಿ ಮುಂತಾದ ಮೂಢನಂಬಿಕೆ ಪದ್ಧತಿಯನ್ನು ಮಾಡಬಾರದು. 
ರೈತಾಪಿ ವರ್ಗಕ್ಕೆ ಹೆಚ್ಚಾಗಿ ಹಾವು ಹಾಗೂ ಚೇಳು ಕಚ್ಚುವ ಸಾಧ್ಯತೆ ಇರುತ್ತದೆ. ರಾತ್ರಿ ಹೊಲ-ಗದ್ದೆಗಳಿಗೆ ಹೋಗುವಾಗ ಬ್ಯಾಟರಿ ಬಳಸಬೇಕು. 4 ಪ್ರಕಾರದ ಹಾವುಗಳು ವಿಷ ಹೊಂದಿವೆ ಹಾಗೂ ಕಡಿತದಿಂದ ಹೆಚ್ಚಾಗಿ ಅದರ ಭಯದಿಂದ ಸಾವಾಗುತ್ತದೆ. ಆದ್ದರಿಂದ ಹಾವು ಕಡಿದ ತಕ್ಷಣ ಆ ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿ, ಚೇಳು ಮತ್ತು ಹಾವು ಕಡಿತಕ್ಕೆ ಉಚಿತ ಲಸಿಕೆ ಸೌಲಭ್ಯವಿದೆ. ಜನರು ಇದನ್ನು ಅರಿಯಬೇಕು ಎಂದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net