ನೀರು ಹರಿಸದೆ ಕೃಷಿಕರಿಗೆ ಅನ್ಯಾಯ ಮಾಡದಿರಿ

ಬಳ್ಳಾರಿ ಗಡಿಗಿ ಚನ್ನಪ್ಪ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಪ್ರಮುಖರಾದ ಹನುಮಂತಪ್ಪ, ಐನಾಥರೆಡ್ಡಿ, ವೆಂಕಟರಮಣ, ವಿರೂಪಾಕ್ಷ ಗೌಡ ಇದ್ದರು.

Published on
ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಭಾನುವಾರ ಪ್ರತಿಭಟನೆ ನಡೆಯಿತು. 
 ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಈಗಾಗಲೇ ಬೆಳೆದಿರುವ ಭತ್ತ, ಜೋಳ, ಮೆಕ್ಕಜೋಳ ಸೇರಿದಂತೆ ವಿವಿಧ  ಬೆಳೆಗಳು ಹಾನಿಗೀಡಾಗಿವೆ. ಹವಾಮಾನ ವೈಪರೀತ್ಯದಿಂದ ಕೀಟಗಳ ಬಾಧೆಯಿದ್ದು, ಬೆಳೆ ಕಾಪಾಡಿಕೊಳ್ಳಲು ಸಾವಿರಾರು ವ್ಯಯಿಸಿ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಯೂರಿಯೂ ಕೊರತೆಯಿಂದ ನಿಗದಿತ ಬೆಲೆಗಿಂತ ದುಬಾರಿ ಬೆಲೆಗೆ ಖರೀದಿಸಿ ಬೆಳೆಗೆ ಹಾಕಲಾಗಿದ್ದು, ರೈತರು ವ್ಯಯಿಸಿದ ಖರ್ಚು ಸಹ ಬಾರದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಜಲಾಶಯದಲ್ಲಿ ಎರಡನೇ ಬೆಳೆಗೆ ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ಆದ್ದರಿಂದ ಜಲಾಶಯಕ್ಕೆ  ಕ್ರಸ್ಟ್ ಗೇಟ್‌ಗಳ ಅಳವಡಿಕೆ ನೆಪದಲ್ಲಿ, ಎರಡನೇ ಬೆಳೆಗೆ ನೀರು ಹರಿಸದೆ ರೈತರಿಗೆ ಅನ್ಯಾಯ ಮಾಡಬಾರದು ಎಂದು ಒತ್ತಾಯಿಸಲಾಯಿತು. ಖಾಲಿ ಕೊಡಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net