ಕೂಡ್ಲಿಗಿ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ 1991ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಿವೃತ್ತ ಉಪನ್ಯಾಸಕ ಎ.ಗುರುಬಸಪ್ಪ , ನಿವೃತ್ತ ಪ್ರಾಚಾರ್ಯ ಕೆ. ಎಂ.ರವೀಂದ್ರನಾಥ, ಅಕ್ಷರ ದಾಸೋಹ ನಿವೃತ್ತ ಸಹಾಯಕ ನಿರ್ದೇಶಕ ಎಂ.ಬಸವರಾಜಪ್ಪ, ನಿವೃತ್ತ ಶಿಕ್ಷಕರಾದ ಡಿ.ನಾಗರಾಜ, ಕೆ.ನಿಂಗಪ್ಪ, ಸಿ.ಮಹಾಲಿಂಗಪ್ಪ, ಬ್ಯಾಳಿ ಗೌರಮ್ಮ, ಕೆ.ತಿಪ್ಪೇಸ್ವಾಮಿ ಇತರರಿದ್ದರು.
ಕೂಡ್ಲಿಗಿ: ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕಭಾವ ಮೂಡುತ್ತದೆ ಎಂದು ನಿವೃತ್ತ ಪ್ರಚಾರ್ಯ ಕೆ.ಎಂ.ರವೀಂದ್ರನಾಥ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದ 1991ನೇ ಸಾಲಿನ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿರುವುದು ಶ್ಲಾಘನೀಯ. ಯುವಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಅಂಟಿಕೊಳ್ಳದೇ ನಮ್ಮ ದೇಶದ ಸಂಸ್ಕೃತಿ ಅರಿತು ಅವುಗಳನ್ನು ಆಚರಿಸಬೇಕು ಎಂದರು.
ಅಕ್ಷರ ದಾಸೋಹ ನಿವೃತ್ತ ಸಹಾಯಕ ನಿರ್ದೇಶಕ ಎಂ.ಬಸವರಾಜಪ್ಪ ಮಾತನಾಡಿ, ಪ್ರತಿಯೊಬ್ಬರೂ ತಮ್ಮದೇ ಆದ ಸ್ಥಾನಮಾನ ಪಡೆದು, ಸಾರ್ಥಕ ಜೀವನ ಸಾಗಿಸುತ್ತಿರುವ ನನ್ನ ಅಸಂಖ್ಯಾತ ವಿದ್ಯಾರ್ಥಿಗಳು ಒಂದೊಂದು ಅಮೂಲ್ಯ ರತ್ನಗಳು. ಅಂತಹವರನ್ನು ತಯಾರು ಮಾಡಿದ ಕೀರ್ತಿ ಶಿಕ್ಷಕರಿಗೆ ಲಭಿಸುತ್ತದೆ. ಪ್ರಪಂಚದಲ್ಲಿ ಗುರುವಿಗೆ ಇರುವ ಸ್ಥಾನ ಅತ್ಯಂತ ಅಮೂಲ್ಯವಾದದ್ದು ಎಂದರು.
ನಿವೃತ್ತ ಶಿಕ್ಷಕರಾದ ಎ.ಗುರುಬಸಪ್ಪ, ಡಿ.ನಾಗರಾಜ, ಬ್ಯಾಳಿ ಗೌರಮ್ಮ, ಕೆ.ನಿಂಗಪ್ಪ, ಸಿ. ಮಹಾಲಿಂಗಪ್ಪ ಸೇರಿ ಹಳೆಯ ವಿದ್ಯಾರ್ಥಿಗಳು ಇದ್ದರು. ಇತ್ತೀಚೆಗೆ ಅಗಲಿದ ಶಿಕ್ಷಕರು ಹಾಗೂ ಡಿ.ಗ್ರೂಪ್ ನೌಕರರಿಗೆ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.