ಗುತ್ತಿಗೆ ಕಾರ್ಮಿಕರನ್ನು ಕೈಬಿಡದಿರಿ

ಸಂಡೂರಿನ ಎನ್‌ಎಂಡಿಸಿ ಕಚೇರಿ ಮುಂದೆ ಸಂಯುಕ್ತ ಗಣಿ ಕಾರ್ಮಿಕ ಸಂಘದಿಂದ ಪ್ರತಿಭಟನೆ ನಡೆಯಿತು. ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಡಾ.ಎನ್.ಪ್ರಮೋದ್, ಪ್ರಮುಖರಾದ ಸುರೇಶ್, ಕಿರಣ್ ಕುಮಾರ್, ಅಂಬರೀಶ್, ಬಾಬು, ಕೃಷ್ಣಪ್ಪ, ತಿಮ್ಮಣ್ಣ, ಬಸವರಾಜ್, ಅಮೀನುದ್ದೀನ್, ಆಯೂಬ್, ಚಿದಾನಂದ, ಪರಶುರಾಮ ಇತರರಿದ್ದರು.
ಸಂಡೂರಿನ ಎನ್‌ಎಂಡಿಸಿ ಕಚೇರಿ ಮುಂದೆ ಸಂಯುಕ್ತ ಗಣಿ ಕಾರ್ಮಿಕ ಸಂಘದಿಂದ ಪ್ರತಿಭಟನೆ ನಡೆಯಿತು. ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಡಾ.ಎನ್.ಪ್ರಮೋದ್, ಪ್ರಮುಖರಾದ ಸುರೇಶ್, ಕಿರಣ್ ಕುಮಾರ್, ಅಂಬರೀಶ್, ಬಾಬು, ಕೃಷ್ಣಪ್ಪ, ತಿಮ್ಮಣ್ಣ, ಬಸವರಾಜ್, ಅಮೀನುದ್ದೀನ್, ಆಯೂಬ್, ಚಿದಾನಂದ, ಪರಶುರಾಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಣಿ ಕಾರ್ಮಿಕ

ಗುತ್ತಿಗೆ ಕಾರ್ಮಿಕರನ್ನು ಕೈಬಿಡದಿರಿ

ಸಂಡೂರು: ಎನ್‌ಎಂಡಿಸಿ ಕುಮಾರಸ್ವಾಮಿ ಗಣಿಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಗಣಿ ಕಾರ್ಮಿಕ ಸಂಘದಿಂದ ಗುರುವಾರ ಎನ್‌ಎಂಡಿಸಿ ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಂಘದ ಕಾರ್ಯಾಧ್ಯಕ್ಷ ಹಾಗೂ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್ ಮಾತನಾಡಿ, ನೂರಾರು ಗುತ್ತಿಗೆ ಕಾರ್ಮಿಕರು ದಶಕಗಳಿಂದ ಶ್ರಮಿಸುತ್ತಿದ್ದಾರೆ.
2026ರ ಮಾ.31ಕ್ಕೆ ರಾಕ್-ಟೆಕ್ ಕಂಪನಿಯ ಗುತ್ತಿಗೆ ಅವಧಿ ಮುಗಿದಿದ್ದು, ವಿಘ್ನೇಶ್ ಇನ್ಫ್ರಾ ಪ್ರಾಜೆಕ್ಟ್‌ಗೆ ಹೊಸದಾಗಿ ಟೆಂಡರ್ ನೀಡಲಾಗಿದೆ. ಇದರಿಂದ ಈ ಹಿಂದೆ ಕೆಲಸ ಮಾಡುತ್ತಿದ್ದ 500ಕ್ಕೂ ಹೆಚ್ಚು ಕಾರ್ಮಿಕರ ಬದುಕು ಇದೀಗ ಅತಂತ್ರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೂಲ ಮಾಲೀಕರಾದ ಎನ್‌ಎಂಡಿಸಿ ಹಾಗೂ ಹೊಸ ಕಾಂಟ್ರಾಕ್ಟೃ್ ಸಂಸ್ಥೆ ವಿಘ್ನೇಶ್ ಕಂಪನಿಯು ಕಾರ್ಮಿಕರನ್ನು ಮುಂದುವರಿಸುವ ಭರವಸೆ ನೀಡಿದ್ದರೂ ಈವರೆಗೂ ಸ್ಪಷ್ಟ ಕ್ರಮ ಕೈಗೊಂಡಿಲ್ಲ. ಸಂಘದಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಚರ್ಚೆಗೆ ಆಹ್ವಾನಿಸಿಲ್ಲ.
ಅನುಭವವಿರುವ ಹಳೆಯ ಕಾರ್ಮಿಕರ ಬದಲಿಗೆ ಹೊಸಬರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂಬ ವದಂತಿಗಳು ಆತಂಕ ಮೂಡಿಸಿವೆ. ತಕ್ಷಣವೇ ಹಳೆಯ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಮನವಿ ಸ್ವೀಕರಿಸಿದ ಎನ್‌ಎಂಡಿಸಿ ಡಿಜಿಎಂ (ಎಚ್‌ಆರ್) ವೇಲು ವಸಂತನ್, ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಏ.20ರಂದು ಎನ್‌ಎಂಡಿಸಿ ಆಡಳಿತ ಮಂಡಳಿ, ಕಾಂಟ್ರಾಕ್ಟೃ್ ಸಂಸ್ಥೆ ಹಾಗೂ ಯೂನಿಯನ್ ಮುಖಂಡರ ಸಭೆ ಕರೆಯಲಾಗುವುದು.
ಕೂಡಲೇ ರಾಕ್-ಟೆಕ್ ಕಂಪನಿಯಡಿ ಕೆಲಸ ಮಾಡಿದ 500 ಕಾರ್ಮಿಕರ ಪಟ್ಟಿಯನ್ನು ಪೂರ್ಣ ಮಾಹಿತಿಯೊಂದಿಗೆ ಒದಗಿಸಬೇಕು ಎಂದು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎನ್.ಪ್ರಮೋದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net