ಗವಿಶ್ರೀಗಳಿಂದ ವಸತಿ ನಿಲಯಕ್ಕೆ ದೇಣಿಗೆ

ಗವಿಶ್ರೀಗಳಿಂದ ವಸತಿ ನಿಲಯಕ್ಕೆ ದೇಣಿಗೆ
ಗವಿಶ್ರೀಗಳಿಂದ ವಸತಿ ನಿಲಯಕ್ಕೆ ದೇಣಿಗೆ
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಮೀಜಿಗಳಿಗೆ ಒಂದಿಷ್ಟು ಗೊಂದಲ

ಬಳ್ಳಾರಿ :

ನಗರದ ವೀರಶೈವ ವಿದ್ಯಾವರ್ಧಕ ಸಂಘದ ಹೀರದಸೂಗಮ್ಮ ಶಾಲೆಯ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಅವರು, ಸಂಘದಿಂದ ಸ್ಥಾಪಿಸಲು ಉದ್ದೇಶಿಸಿರುವ ಉಚಿತ ವಸತಿ ನಿಲಯಕ್ಕೆ ಪ್ರಾಂಜಲ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ ಎಂದು ವೀ.ವಿ. ಸಂಘದ ಜಿಲ್ಲಾಧ್ಯಕ್ಷ ಡಾ.ಕಣೇಕಲ್ ಮಹಾಂತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲೆಯ ಶತಮಾನೋತ್ಸವ ನಡೆದ ಕಾರ್ಯಕ್ರಮದಲ್ಲಿ ಗೊಂದಲಮಯ ವಾತಾವರಣ ಉಂಟಾದ ಹಿನ್ನಲೆಯಲ್ಲಿ ಸ್ವಾಮೀಜಿ, ಆಶೀರ್ವಚನವನನ್ನು ಅರ್ಧಕ್ಕೆ ನಿಲ್ಲಿಸಿ ಹೊರಟಿದ್ದರು. ಅಲ್ಲದೇ, ವೀ.ವಿ. ಸಂಘದಿಂದ ಶ್ರೀಗಳಿಗೆ ನೀಡಿದ ದೇಣಿಗೆ ವಾಪಾಸ್ ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಕಾರ್ಯಕ್ರಮದಲ್ಲಿ ಸಾಂಸ್ಕೃತಿ ಪ್ರದರ್ಶನ ನೀಡಲು ಬಂದಿದ್ದ ಮಕ್ಕಳ, ಧ್ವನಿ, ಗದ್ದಲದಿಂದ ಸ್ವಾಮೀಜಿಗಳಿಗೆ ಒಂದಿಷ್ಟು ಗೊಂದಲಯಾಗಿದೆ. ಶ್ರಿಗಳು ಆದ ವ್ಯತ್ಯಯಗಳನ್ನು ಮನ್ನಿಸಿರುವುದಾಗಿ ಹೇಳಿದ್ದಾರೆ ಎಂಬುದಾಗಿ ಜಿಲ್ಲಾಧ್ಯಕ್ಷ ಮಹಾಂತೇಶ್ ತಿಳಿಸಿದ್ದಾರೆ.
=====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net