ನೀರಾವರಿ ಯೋಜನೆ ಅನುಷ್ಠಾನ ಆದ್ಯತೆಯಾಗಲಿ

ಹಗರಿಬೊಮ್ಮನಹಳ್ಳಿಯಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ವಿಜಯನಗರ ಜಿಲ್ಲಾ ಮಟ್ಟದ ಸಭೆ ಶುಕ್ರವಾರ ನಡೆಯಿತು. ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಗೋಣಿಬಸಪ್ಪ, ಜಿ.ಲಕ್ಷ್ಮೀಪತಿ  ಇತರರಿದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ವಿಜಯನಗರ ಜಿಲ್ಲಾ ಮಟ್ಟದ ಸಭೆ ಶುಕ್ರವಾರ ನಡೆಯಿತು. ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಗೋಣಿಬಸಪ್ಪ, ಜಿ.ಲಕ್ಷ್ಮೀಪತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತಸಂಘ ವಿಜಯನಗರ ಜಿಲ್ಲಾಧ್ಯಕ್ಷ ಎ.ಆಂಜನೇಯಲು ಹೇಳಿಕೆ

ಹಗರಿಬೊಮ್ಮನಹಳ್ಳಿ: ಕೃಷಿಕ ಭವನದಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ರಾಜ್ಯ ರೈತಸಂಘದಿಂದ ವಿಜಯನಗರ ಜಿಲ್ಲಾ ಮಟ್ಟದ ಶುಕ್ರವಾರ ಸಭೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಜಿಲ್ಲಾಧ್ಯಕ್ಷ ಎ.ಆಂಜನೇಯಲು ಮಾತನಾಡಿ, ಕಲ್ಯಾಣ ಕರ್ನಾಟಕ ಯೋಜನೆಯಡಿ 20ಸಾವಿರ ಕೋಟಿ ರೂ. ಅನುದಾನವಿದ್ದು, ಇದನ್ನು ಶಾಶ್ವತ ನೀರಾವರಿಗೆ ಬಳಸಿಕೊಳ್ಳುವ ಅವಕಾಶವಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದರು.
ಹೂವಿನ ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಭದ್ರಾ ನದಿಯಿಂದ ನೈಸರ್ಗಿಕವಾಗಿಯೇ ನೀರು ಹರಿದು ಎಲ್ಲ ಕೆರೆಗಳು ತುಂಬಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಏತನೀರಾವರಿ ಯೋಜನೆಯಡಿ ಸರಳವಾಗಿ ಮೇಲ್ಭಾಗದಿಂದ ನೀರು ಹರಿಸಿದರೆ ಅಂತರ್ಜಲ ಹೆಚ್ಚುತ್ತೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೀರಾವರಿ ಸೌಲಭ್ಯ ದೊರೆಯಲಿದೆೆ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಿಕೊಳ್ಳುವ ಮೂಲಕ ನಿರಂತರ ಹೋರಾಟಕ್ಕೆ ಮುಂದಾಗೋಣ. ಕೆರೆ-ಕಟ್ಟೆಗಳ ಭರ್ತಿ ಯೋಜನೆ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಲು ಕಂಕಣಬದ್ಧರಾಗೋಣ ಎಂದರು.
ತಾಲೂಕು ಅಧ್ಯಕ್ಷ ಬಸವನಗೌಡ ಮಾತನಾಡಿ, ಹಸಿರು ಶಾಲು ಹಾಕಿಕೊಂಡು ವಸೂಲಿದಂಧೆ ಮಾಡುವವರಿಗೆ ಕರಿವಾಣ ಹಾಕಬೇಕು. ವಿಜಯನಗರ ಜಿಲ್ಲೆ ಬರ ಪ್ರದೇಶವೆಂದು ಘೋಷಿಸಿ ಎಲ್ಲ ಬ್ಯಾಂಕುಗಳ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರಸಗೊಬ್ಬರ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಹತ್ತಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ ರೈತರಿಗೆ ಜಮೀನಿನ ಹಕ್ಕುಪತ್ರ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮರಿಯಮ್ಮನಹಳ್ಳಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ವಿಭಾಗೀಯ ಕಾರ್ಯಾಧ್ಯಕ್ಷ ಬಿ.ಗೋಣಿಬಸಪ್ಪ, ಪ್ರಗತಿಪರ ರೈತ ಬಾಣದ ಶಿವಪ್ಪ, ವಕೀಲ ಕೊಟ್ರೇಶ ಶೆಟ್ಟರ್, ಸಹಮತ ವೇದಿಕೆ ತಾಲೂಕು ಅಧ್ಯಕ್ಷ ಜಿ.ಲಕ್ಷ್ಮೀಪತಿ, ಕೃಷಿಕ ಸಮಾಜ ತಾಲೂಕು ಅಧ್ಯಕ್ಷ ಕೆ.ಪಿ.ದೇವರಾಜ್, ನೀಲಂಕಠಪ್ಪ ಮತ್ತಿತರರು ಮಾತನಾಡಿದರು.
ಮರಿಯಮ್ಮನಹಳ್ಳಿ ಹುಸೇನ್‌ಸಾಬ್, ರಾಜು, ಫೋಟೋ ರಾಮಣ್ಣ, ಕಠಾರೆ ಬಾಬಣ್ಣ, ಹಡಗಲಿಯ ಶಿವರಾಜ್, ಕೊಟ್ಟೂರಿನ ರಮೇಶ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net