ಸಂಚಾಲಕ ಡಾ.ಭಟ್ಟ ರಾಮು ಮಾತನಾಡಿ, ಸಾವಿರಾರು ಭಕ್ತರು ಏಕಕಾಲಕ್ಕೆ ನದಿಯಲ್ಲಿ ಸ್ನಾನಕ್ಕೆ ಸೋಪು, ಶಾಂಪು ಬಳಸಿ ಸ್ನಾನ ಮಾಡಿದಲ್ಲಿ ನದಿ ನೀರು ಕಲುಷಿತವಾಗಿ ಜಲಚರಗಳಿಗೆ ಮಾರಕವಾಗುತ್ತದೆ. ನದಿ ನೀರು ನಿರ್ಮಲತರ ಕಳೆದುಕೊಂಡು ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಅಭಿಯಾನದಡಿ ಕಡ್ಲೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.