ಬಾಕ್ಸ್ : ಸದ್ಯ, ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಹದಿನೈದು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲು ಉದ್ದೇಶಿಸಿರುವ ಮೆಗಾಡೇರಿ ಭವಿಷ್ಯ ಈ ಯೋಜನೆಯ ಅನುಷ್ಠಾನದ ಮೇಲೆ ನಿಂತಿದೆ. ಕೆಎಂಆರ್‌ಸಿ ಹಾಗೂ ರಾಬಕೊವಿ ಒಕ್ಕೂಟದಿಂದ 160 ಕೋಟಿ ರೂ. ವೆಚ್ಚದಲ್ಲಿ ನಿತ್ಯ ನಾಲ್ಕು ಲಕ್ಷ ಲೀ. ಹಾಲು ಉತ್ಪಾದಿಸುವ ಗುರಿ ಹೊಂದಿದೆ. ಆದರೆ, ನಿತ್ಯ ನಾಲ್ಕು ಲಕ್ಷ ಲೀ. ಉತ್ಪಾದನೆಯಾಗುವಷ್ಟು ಹಾಲು ಉತ್ಪಾದಕ ಸಂಘಗಳಿವೆ ಎಂಬುದಾಗಿ ಜಿಲ್ಲಾಡಳಿತವೂ ಒಕ್ಕೂಟವನ್ನು ಪ್ರಶ್ನಿಸಿದೆ. ಆದ್ದರಿಂದ, ಸದ್ಯ, ರಾಬಕೊವಿ ಒಕ್ಕೂಟದಲ್ಲಿ ನಾಲ್ಕು ಜಿಲ್ಲೆಗಳಿಂದ 2.20 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ಈ ಯೋಜನೆಯಿಂದ ಹಸುಗಳು ವಿತರಣೆಯಾದರೆ ನಾಲ್ಕು ಲಕ್ಷ ಲೀ. ಹಾಲು ಉತ್ಪಾದನೆಯಾಗಲಿದೆ ಎಂಬ ಒಕ್ಕೂಟದ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಒಟ್ಟಾರೆ, ಮೆಗಾಡೇರಿ ನಿರ್ಮಾಣದ ಭವಿಷ್ಯ ಹಸುಗಳ ವಿತರಣೆಯ ಮೇಲಿದೆ.