ಹರಪನಹಳ್ಳಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ಯಾಡ್ ವುಮೆನ್ ಭಾರತಿ ಗುಡ್ಲನೂರು ಅವರು ಮುಟ್ಟಿನ ಪ್ಯಾಡ್‌ಗಳ ಬಳಸುವಿಕೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿದರು. ಶಕ್ತಿ ಅಭಿಯಾನದ ರಾಜ್ಯ ಸಂಚಾಲಕಿ ಎಂ ಪಿ ವೀಣಾ ಮಹಾಂತೇಶ್ ಇದ್ದರು.
ಹರಪನಹಳ್ಳಿ: ವಿದ್ಯಾರ್ಥಿನಿಯರಿಗೆ ಮುಟ್ಟು ಎನ್ನುವುದು ಸ್ವಾಭಾವಿಕ ಜೈವಿಕ ಪ್ರಕ್ರಿಯೆಯಾಗಿದೆ ಎಂದು ಪ್ಯಾಡ್ ವುಮೆನ್ ಭಾರತಿ ಗುಡ್ಲನೂರು ಅವರು ಶಾಲಾ ಮಕ್ಕಳಿಗೆ ಮುಟ್ಟಿನ ಅರಿವು ಮೂಡಿಸಿದರು.
ನಗರದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಮುಟ್ಟಿನ ಪ್ಯಾಡ್‌ಗಳ ಬಳಸುವಿಕೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಿ ಮಾತನಾಡಿದರು.
ಸ್ಯಾನಿಟರಿ ಪ್ಯಾಡ್ ಬಳಕೆ, ಮತ್ತು ಎಷ್ಟು ಗಂಟೆಗೊಮ್ಮೆ ಅದನ್ನು ಬದಲಾಯಿಸಬೇಕು. ಮತ್ತು ನೈರ್ಮಲ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು. ಬಳಸಿದ ಪ್ಯಾಡ್‌ಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಸುರಕ್ಷಿತವಾಗಿ ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಮುಟ್ಟಿನ ಕುರಿತು ಕೆಲವರಿಗೆ ಇರುವ ತಪ್ಪು ಕಲ್ಪನೆ ಮತ್ತು ಮೌಢ್ಯ ಹೋಗಲಾಡಿಸುವ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಿದರು. ಸ್ಯಾಂಜಿನ್ ಪ್ಯಾಡ್ ಬಳಕೆ, ಹೆಣ್ಣು ಮಕ್ಕಳ ಮುಟ್ಟಿನ ಆರೋಗ್ಯವು ಮೂಲಭೂತ ಹಕ್ಕು ಎಂದು ಸುಪ್ರೀಂ ಆದೇಶ ನೀಡಿರುವ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಅಭಿಯಾನದ ಸಂಚಾಲಕರಾದ ರೂಪಾ, ರತ್ನಮ್ಮ, ಗಾಯತ್ರಿ, ಕಾಳಮ್ಮ, ರೇಖಾ, ಗೋಣೆಮ್ಮ, ಸುಮಲತಾ, ನಂದನ, ನಿರ್ಮಲಾ, ಹಾಗೂ ಶಾಲೆ ಮುಖ್ಯಶಿಕ್ಷಕ ಶಿವಾಜಿ, ಸಹಶಿಕ್ಷಕರಾದ ಚೇತನ್ ಬಣಕಾರ್, ಶಶಿಕಲಾ ಇತರರಿದ್ದರು.