ಹಕ್ಕುಪತ್ರ ನೀಡುವಲ್ಲಿ ತಾರತಮ್ಯ ಧೋರಣೆ ಸಲ್ಲ

ಹರಪನಹಳ್ಳಿ ತಾಲೂಕಿನ ಚಿಕ್ಕಮೇಗಳಗೆರೆ ಗ್ರಾಮದ ನಿವಾಸಿಗಳು ಪಿಡಿಒ ಯಮುನಾನಾಯ್ಕ ಹಾಗೂ ಗ್ರಾಮ ಆಡಳಿತಾಧಿಕಾರಿ ಶ್ರುತಿಗೆ ಸೋಮವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಕೆ.ಹನುಮಂತಪ್ಪ, ಅಂಜಿನಪ್ಪ, ಬಿ.ಪರಶುರಾಮ, ಉಮೇಶ್, ದೊಡ್ಡಪ್ಪರ ನಾಗರಾಜ್, ಹನುಮಂತಪ್ಪ, ಮಾರುತಿ, ತಿಪ್ಪಣ್ಣ, ಬಸವರಾಜ್, ಮಲ್ಲೇಶಪ್ಪ, ಅಭಿಜಿತ್, ಮಲ್ಲಿಕಾರ್ಜುನ, ಪರಶುರಾಮಪ್ಪ, ಭರತ, ನಾಗಪ್ಪ, ಶಿವಣ್ಣ ಇದ್ದರು.

Published on
ಹರಪನಹಳ್ಳಿ: ತಾಲೂಕಿನ ಚಿಕ್ಕಮೇಗಳಗೆರೆ ಗ್ರಾಮದ ಸರ್ವೇ ನಂ.578 ರಲ್ಲಿ ವಾಸವಾಗಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪಿಡಿಒ ಯಮುನಾನಾಯ್ಕ ಹಾಗೂ ಗ್ರಾಮ ಆಡಳಿತಾಧಿಕಾರಿ ಶ್ರುತಿಗೆ ನಿವಾಸಿಗಳು ಸೋಮವಾರ ಮನವಿ ಸಲ್ಲಿಸಿದರು.
ನಿಗದಿತ ಪ್ರದೇಶದಲ್ಲಿ ಸುಮಾರು 40 ವರ್ಷಗಳಿಂದ ಹಲವು ಕುಟುಂಬಗಳು ವಾಸವಾಗಿವೆ. ಮನೆಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ಸಿಗಲಿದೆ ಎನ್ನುವ ಭರವಸೆಯಿದ್ದು, ಸರ್ಕಾರ ಹಕ್ಕುಪತ್ರ ವಿತರಣೆ ಮಾಡದೆ, ನಿರ್ಲಕ್ಷ್ಯ ತೋರಿದೆ ಎಂದು ದೂರಿದರು. ಹಕ್ಕುಪತ್ರಗಳ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಒಂದೇ ಸರ್ವೇ ನಂಬರ್‌ನಲ್ಲಿ ಕೆಲವರಿಗೆ ಹಕ್ಕುಪತ್ರ ನೀಡಲು ತಯಾರಿ ನಡೆಸುತ್ತಿದ್ದರೆ, ಇನ್ನು ಕೆಲವರಿಗೆ ಸ್ಪಂದಿಸದೆ ಅನ್ಯಾಯ ಎಸಗುತ್ತಿದ್ದಾರೆ. ಅಧಿಕಾರಿಗಳು ಮರು ಸಮೀಕ್ಷೆ ನಡೆಸಿ ಅರ್ಹರಿಗೆ ಹಕ್ಕಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
3.79 ಎಕರೆ ಜಮೀನಿನ ಪೈಕಿ ಜನ ವಾಸವಾಗಿರುವ 16 ಸೆಂಟ್ಸ್ ಭೂಮಿಯನ್ನು ಯಾವುದೇ ಮಾಹಿತಿ ನೀಡದೆ ಪೋಡಿ ಮಾಡಲಾಗಿದ್ದು, ಅದನ್ನು ರದ್ದುಗೊಳಿಸಿ ಯಥಾಸ್ಥಿತಿಯಲ್ಲಿ ಉಳಿಸಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net