ಆಡಳಿತದಲ್ಲಿ ಡಿಐಜಿ ಹಸ್ತಕ್ಷೇಪ

ಆಡಳಿತದಲ್ಲಿ  ಡಿಐಜಿ ಹಸ್ತಕ್ಷೇಪ
ಆಡಳಿತದಲ್ಲಿ ಡಿಐಜಿ ಹಸ್ತಕ್ಷೇಪ
Published on

ಪ್ರಮುಖ ಮುಖ್ಯಾಂಶಗಳು

  • ವರ್ಗಾವಣೆ
ಬಳ್ಳಾರಿ : ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕಿಯಾಗಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್, ನಗರದ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ವರ್ಗಾವಣೆಗೊಂಡ ಬಳಿಕವೂ ಕೆಳ ಹಂತದ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಕಡತಗಳ ವಿಚಾರದಲ್ಲಿ ಮೌಖಿಕ ಸೂಚನೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಬಳ್ಳಾರಿಯ ವಲಯದ ಸಹಾಯಕ ಆಡಳಿತಾಧಿಕಾರಿ ಬಸವರಾಜ್ ಅವರಿಗೆ ಫೆ.4ರಂದು ವಾಟ್ಸ್ ಆ್ಯಪ್ ಕರೆ ಮಾಡಿರುವ ಕಟಿಯಾರ್ ಅವರು, ನನ್ನ ವರ್ಗಾವಣೆ ವಿಚಾರ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿದೆ (ಸಿಎಟಿ) ಪ್ರಮುಖ ಕಡತಗಳನ್ನು ಈಗಿನ ಅಧಿಕಾರಿಗಳಿಗೆ ನೀಡಬಾರದು, ಹಾಗೇನಾದರೂ ಮಾಡಿದರೆ ಸಿಎಟಿಯಲ್ಲಿ ತಮ್ಮನ್ನೂ ಪ್ರತಿವಾದಿಯನ್ನಾಗಿ ಮಾಡಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿರುವ ವಿಡಿಯೋ ಹರಿದಾಡಿದೆ. ಪೂರಕವಾಗಿ ಬಸವರಾಜ್ ಅವರು, ವರ್ತಿಕಾ ಕಟಿಯಾರ್ ಅವರಿಗೆ ಪತ್ರ ಬರೆದಿದ್ದು, ನಿಮ್ಮ ನಿರ್ದೇಶನಗಳು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶ ಹೊಂದಿವೆ. ಮುಂದೆ ಯಾವುದೇ ರೀತಿಯ ಕರೆಗಳು, ಪತ್ರಗಳು ಯಾರಿಂದಲಾದರೂ ಮೌಖಿಕವಾಗಿ ಸೂಚಿಸುವ ರೀತಿಯಲ್ಲಿ ತಿಳಿ ಹೇಳುವುದು ಬೇಡ ಎಂದು ಕೋರಿದ್ದಾರೆ. ಸದ್ಯ, ವರ್ತಿಕಾ ಕಟಿಯಾರ್ ಅವರು ವರ್ಗಾವಣೆ ಪ್ರಶ್ನಿಸಿ ಸಿಎಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net