ಕುಟುಂಬ ನಿರ್ವಹಣೆಗೆ ತೊಂದರೆ

ಲಿಂಗಸುಗೂರು ಪುರಸಭೆ ಕಚೇರಿ ಮುಂಭಾಗದಲ್ಲಿ ಬೀದಿಬದಿ ವ್ಯಾಪಾರಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಸಂಘದ ಸಂಚಾಲಕ ಲಿಂಗಪ್ಪ ಪರಂಗಿ, ಜಗನ್ನಾಥ ಜಾದವ್, ಶರಣಪ್ಪ, ಅಮರಯ್ಯ ಘಂಟಿ, ತಿಪ್ಪರಾಜು ಗೆಜ್ಜಲಗಟ್ಟ, ಚಿದಾನಂದ ಕಸಬಾ ಲಿಂಗಸುಗೂರು, ಬಸವರಾಜ ನಾಯಕ, ಎಂ ನಿಸರ್ಗ, ಕುಪ್ಪಮ್ಮ, ಆದಮ್ಮ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವ್ಯಾಪಾರ
  • ಸೌಂದರ್ಯ
  • ತಕರಾರು ಇಲ್ಲ
ಲಿಂಗಸುಗೂರು: ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಕಲ್ಯಾಣ ಕರ್ನಾಟಕ ಬೀದಿಬದಿ ಮಾರಾಟಗಾರರ ಸಂಘದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಬುಧವಾರ 3ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ನಿರತ ಬೀದಿಬದಿ ವ್ಯಾಪಾರಿಗಳನ್ನು ಉದ್ದೇಶಿಸಿ ಸಂಘದ ಸಂಚಾಲಕ ಲಿಂಗಪ್ಪ ಪರಂಗಿ ಮಾತನಾಡಿ ರಸ್ತೆ ಅತಿಕ್ರಮಣ ಮಾಡಿ ಪ್ರತಿಷ್ಠಿತ ವ್ಯಕ್ತಿಗಳು ಕಟ್ಟಡಗಳನ್ನು ಕಟ್ಟಿದ್ದಾರೆ.
ಅಂಥಹ ಕಟ್ಟಡಗಳನ್ನು ತೆರವುಗೊಳಿಸದೆ ಹೊಟ್ಟೆಪಾಡಿಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕುಟುಂಬ ನಿರ್ವಹಣೆಗಾಗಿ ಬೀದಿ ಬದಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿರುವುದು ಖಂಡನೀಯ.
ಪಟ್ಟಣ ಅಭಿವೃದ್ಧಿ ಪಡಿಸಲು, ಸೌಂದರ್ಯಗೊಳಿಸಲು ತಕರಾರು ಇಲ್ಲ. ಆದರೆ ಸಾಲಮಾಡಿ ಅಂಗಡಿಗಳನ್ನಿಟ್ಟುಕೊಂಡವರಿಗೆ ತೊಂದರೆ ನೀಡಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಪುರಸಭೆ ಆಡಳಿತಾಧಿಕಾರಿಗಳು, ಮುಖ್ಯಾಧಿಕಾರಿಗಳು ಬೀದಿಬದಿ ಮಾರಾಟಗಾರರ ಅಂಗಡಿಗಳನ್ನು ಮರುಸ್ಥಾಪಿಸಲು ಅನುಕೂಲ ಮಾಡಿಕೊಡಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net