ಕೆಲ ಭಕ್ತರು ಬೆನ್ನಿಗೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು ಗುಂಡು ಅಸ್ತ್ರ, ಸಣ್ಣತೇರು ಅಸ್ತ್ರ, ಆಟೋ ಅಸ್ತ್ರ, ರಾಕೆಟ್ ಅಸ್ತ್ರ ಧರಿಸಿ ಭಕ್ತಿ ಅರ್ಪಿಸಿದರು. ತಮಿಳುನಾಡಿನ ವಾದ್ಯ ಕಲಾವಿದರು ಪಂಬೈ ಮತ್ತು ಡೆಮೈ(ಪಂಪಕಾರ್)ವಾದ್ಯ ನುಡಿಸಿ ಗಮನ ಸೆಳೆದರು. ಏ.24ರಂದು ಕಂಕಣಧಾರಣ, ಧ್ವಜಾರೋಹಣ, ಏ.27ರಂದು ಅಗ್ನಿಕುಂಭೋತ್ಸವ ನಡೆದವು.