ಕೌಶಲ ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಿ

ಕೊಟ್ಟಾಲ್‌ನಲ್ಲಿ ಹೊಲಿಗೆ ಉಚಿತ ತರಬೇತಿ ಕಾರ್ಯಾಗಾರಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್ ಚಾಲನೆ ನೀಡಿದರು. ಪ್ರಮುಖರಾದ ಸುಧಾ ಗಾಂವ್ಕರ್, ಮಂಜುಳಾ ಆರ್.ಎನ್., ತನುಜಾ, ಜ್ಯೋತಿ ಇತರರಿದ್ದರು.
ಕೊಟ್ಟಾಲ್‌ನಲ್ಲಿ ಹೊಲಿಗೆ ಉಚಿತ ತರಬೇತಿ ಕಾರ್ಯಾಗಾರಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್ ಚಾಲನೆ ನೀಡಿದರು. ಪ್ರಮುಖರಾದ ಸುಧಾ ಗಾಂವ್ಕರ್, ಮಂಜುಳಾ ಆರ್.ಎನ್., ತನುಜಾ, ಜ್ಯೋತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ
  • ಜ್ಞಾನ
  • ವಿಕಾಸ
ಕಂಪ್ಲಿ: ಮಹಿಳೆಯರು ಫ್ಯಾಶನ್ ಡಿಜೈನ್ ಕೌಶಲ ಅಳವಡಿಸಿಕೊಂಡಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್ ಹೇಳಿದರು.
ಕೊಟ್ಟಾಲ್ ರಾಮದೇವಸ್ಥಾನದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಮ್ಮಿಕೊಂಡಿದ್ದ ಹೊಲಿಗೆ ಉಚಿತ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಹೊಲಿಗೆ ಯಂತ್ರ ಬಳಸಿಕೊಂಡು ಜೀವನ ಸಾಗಿಸುವಷ್ಟು ಮಾರುಕಟ್ಟೆ ವ್ಯಾಪ್ತಿಯಿದೆ. ತರಬೇತಿ ಪಡೆದ ಮಹಿಳೆಯರು ಕೌಶಲ ಅಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು. ಜ್ಞಾನವಿಕಾಸ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಸುಧಾ ಗಾಂವ್ಕರ್, ಸಮನ್ವಯಾಧಿಕಾರಿ ಮಂಜುಳಾ ಆರ್.ಎನ್., ತರಬೇತಿ ಶಿಕ್ಷಕಿ ತನುಜಾ, ಕೇಂದ್ರದ ಅಧ್ಯಕ್ಷೆ ಜ್ಯೋತಿ, ಸ್ಥಳೀಯ ಸೇವಾ ಪ್ರತಿನಿಧಿ ಪದ್ಮಾವತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net