

ಹೂವಿನಹಡಗಲಿ: ಅಧಿಕಾರಕ್ಕೆ ಅಂಟಿಕೊಳ್ಳದೆ ಜನರಿಗಾಗಿ ನಿರಂತರ ಸೇವೆಯಲ್ಲಿ ತೊಡಗಿದ ರಾಜಕಾರಣಿಗಳಲ್ಲಿ ದೇವರಾಜ ಅರಸು ಸಹ ಒಬ್ಬರು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೊಟ್ರಗೌಡ ಹೇಳಿದರು.
ತಾಪಂ ರಾಜೀವ್‌ಗಾಂಧಿ ಸಭಾಂಗಣದಲ್ಲಿ ತಾಲೂಕ ಆಡಳಿತ, ತಾಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಸೇವೆ ಬಯಸಿ ರಾಜಕೀಯಕ್ಕೆ ಬಂದ ಅರಸು, ಆಡಳಿತಾವಧಿ ಪೂರ್ತಿ ನಿಷ್ಕಲ್ಮಶ ಆಡಳಿತ ನೀಡಿದರು ಎಂದು ತಿಳಿಸಿದರು.ತಾಪಂ ಇಒ ಜಿ.ಪರಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ರಮೇಶ ಮಾತನಾಡಿದರು. ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳಿದ್ದರು.