ಹಿಂದುಳಿದ ವರ್ಗಗಳ ಕಲ್ಯಾಣಕಾರ

ಕಂಪ್ಲಿಯಲ್ಲಿ ನಡೆದ ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿದರು. ಅಧಿಕಾರಿಗಳಾದ ಎಸ್.ಡಿ.ರಮೇಶ್, ಗಾದಿಲಿಂಗಪ್ಪ, ಕೆ.ವಿರೂಪಾಕ್ಷಪ್ಪ, ಮಾಲತೇಶ ದೇಶಪಾಂಡೆ ಇತರರಿದ್ದರು.
ಕಂಪ್ಲಿಯಲ್ಲಿ ನಡೆದ ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿದರು. ಅಧಿಕಾರಿಗಳಾದ ಎಸ್.ಡಿ.ರಮೇಶ್, ಗಾದಿಲಿಂಗಪ್ಪ, ಕೆ.ವಿರೂಪಾಕ್ಷಪ್ಪ, ಮಾಲತೇಶ ದೇಶಪಾಂಡೆ ಇತರರಿದ್ದರು.
Published on

ಕಂಪ್ಲಿ: ಹಿಂದುಳಿದ ವರ್ಗ, ದಲಿತ ಮತ್ತು ಶೋಷಿತರ ಪ್ರಬಲ ಧ್ವನಿಯಾಗುವ ಮೂಲಕ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಹರಿಕಾರರಾಗಿದ್ದಾರೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಆಯೋಜಿಸಿದ್ದ ಗುರುವಾರ ದಿ.ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಹಿಂದುಳಿದ ವರ್ಗದವರ ಸ್ಥಿತಿ ಅರಿಯಲು ಎಲ್.ಜಿ.ಹಾವನೂರು ಆಯೋಗ ರಚನೆ, ಅಸ್ಪಶ್ಯತೆ ನಿವಾರಣೆಗೆ ಕಠಿಣ ಕ್ರಮ ಸೇರಿ ತಮ್ಮ ಚಿಂತನೆಗಳನ್ನೇ ಸಾಕಾರಗೊಳಿಸುವ ಮೂಲಕ ಆಡಳಿತದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿರಿಸಿದರು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿಲಯ ಪಾಲಕ ಗಾದಿಲಿಂಗಪ್ಪ ಮಾತನಾಡಿದರು. ಸದ್ಭಾವನಾ ದಿನ ನಿಮಿತ್ತ ಪ್ರತಿಜ್ಞಾವಿಧಿಯನ್ನು ಅಧಿಕಾರಿಗಳಿಗೆ ತಹಸೀಲ್ದಾರ್ ಬೋಧಿಸಿದರು. ಪ್ರಭಾರ ಉಪ ತಹಸೀಲ್ದಾರ್ ಎಸ್.ಡಿ.ರಮೇಶ್, ನಿಲಯ ಪಾಲಕ ಕೆ.ವಿರೂಪಾಕ್ಷಿ, ವಿಎಒ ಮಾಲತೇಶ ದೇಶಪಾಂಡೆ, ಲಕ್ಷ್ಮಣನಾಯ್ಕ, ಪಿಡಿಒ ಯು. ಮಲ್ಲಿಕಾರ್ಜುನ, ಕೆ.ಎಚ್.ಶಶಿಕಾಂತ, ಶಿಲ್ಪಾರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net