ತುರ್ತು ಪರಿಸ್ಥಿತಿಯಲ್ಲೂ ಸುಸ್ಥಿರ ಆಡಳಿತ

ಕುರುಗೋಡು ತಾಲೂಕು ಆಡಳಿತ ಕಚೇರಿಯಲ್ಲಿ ದೇವರಾಜ ಅರಸು ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ನರಸಪ್ಪ, ಗ್ರೇಟ್ 2 ತಹಸೀಲ್ದಾರ್ ಮಲ್ಲೇಶಪ್ಪ, ಶಿರಸ್ತೇದಾರ್ ವಿಜಯ ಕುಮಾರ, ಆರ್‌ಐ ಸುರೇಶ್, ಸಿಬ್ಬಂದಿ ಲತಾ, ಸರಸ್ವತಿ ಇತರರಿದ್ದರು.
ಕುರುಗೋಡು ತಾಲೂಕು ಆಡಳಿತ ಕಚೇರಿಯಲ್ಲಿ ದೇವರಾಜ ಅರಸು ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ನರಸಪ್ಪ, ಗ್ರೇಟ್ 2 ತಹಸೀಲ್ದಾರ್ ಮಲ್ಲೇಶಪ್ಪ, ಶಿರಸ್ತೇದಾರ್ ವಿಜಯ ಕುಮಾರ, ಆರ್‌ಐ ಸುರೇಶ್, ಸಿಬ್ಬಂದಿ ಲತಾ, ಸರಸ್ವತಿ ಇತರರಿದ್ದರು.
Published on

ಕುರುಗೋಡು: ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜೀವನವೇ ಮಾದರಿ. ಅವರ ತತ್ವದಾರ್ಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ನರಸಪ್ಪ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ದೇವರಾಜ ಅರಸು ಜಯಂತಿಯಲ್ಲಿ ಮಾತನಾಡಿದರು. ಜನರ ಕಲ್ಯಾಣಕ್ಕಾಗಿ ಜನತಾ ವಸತಿ, ಭಾಗ್ಯಜ್ಯೋತಿ ಯೋಜನೆ, ಉಳುವವನೆ ಭೂಮಿ ಒಡೆಯ, ಜನತಾ ನ್ಯಾಯಾಲಯ, ಜಿಲ್ಲಾ ನ್ಯಾಯಾಮಂಡಳಿ ಕಾಯ್ದೆ ಜಾರಿ, ಜೀತ ಪದ್ಧತಿ ನಿರ್ಮೂಲನೆ ಜತೆಗೆ ಉತ್ಕೃಷ್ಠ ಯೋಜನೆ ಜಾರಿಗೆ ತರುವ ಮೂಲಕ ಜನರಿಗೆ ಆತ್ಮವಿಶ್ವಾಸ ತುಂಬಿದ್ದರು.

ಡಾ. ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿದ ಜನಪರ ಅಂಶ ಅನುಷ್ಠಾನಗೊಳಿಸಿದರು. ಭಾರತದ ತುರ್ತು ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ತೊಂದರೆಯಾಗದಂತೆ ಆಡಳಿತ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net