ಡಿಸೈರ್ಸ್ ಮಹಿಳಾ ಉದ್ಯಮಿಗಳ ಪ್ರದರ್ಶನ

ಡಿಸೈರ್ಸ್ ಮಹಿಳಾ ಉದ್ಯಮಿಗಳ ಪ್ರದರ್ಶನ
ಡಿಸೈರ್ಸ್ ಮಹಿಳಾ ಉದ್ಯಮಿಗಳ ಪ್ರದರ್ಶನ
Published on

ಪ್ರಮುಖ ಮುಖ್ಯಾಂಶಗಳು

  • ಅಲ್ಲಂ ಭವನದಲ್ಲಿ ಆ.8 ಹಾಗೂ 9ರಂದು
  • ಮಾರಾಟ ಮೇಳೆ ಆಯೋಜನೆ
ಬಳ್ಳಾರಿ : ಇಲ್ಲಿನ ಅಲ್ಲಂ ಭವನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಡಿಸೈರ್ಸ್ ಮಹಿಳಾ ಉದ್ಯಮಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆ.8 ಹಾಗೂ 9ರಂದು ಹಮ್ಮಿಕೊಳ್ಳಲಾಗಿದೆ. ಮಹಿಳಾ ಉದ್ಯಮಿಗಳ ಪ್ರೋತ್ಸಾಹ ಹಾಗೂ ಅವರ ಸ್ವಾವಲಂಬಿ ಕನಸುಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಒಂದೇ ಸೂರಿನಡಿ ವಿವಿಧ ನಮೂನೆಯ ಉಡುಪುಗಳು, ಆಭರಣಗಳು, ಹ್ಯಾಂಡ್‌ಬ್ಯಾಗ್‌ಗಳು, ಫ್ಯಾಷನ್ ಆಕ್ಸೆಸರೀಸ್, ಗೃಹ ಅಲಂಕಾರಿಕ ವಸ್ತುಗಳು ಹಾಗೂ ರುಚಿಕರ ಆಹಾರ ಮಳಿಗೆಗಳು ಲಭ್ಯವಿರಲಿವೆ.
ವಿಶೇಷ ಆಕರ್ಷಣೆ : ಆ.9ರಂದು ಬೆಳಗ್ಗೆ 10:00 ರಿಂದ ಸಂಜೆ 7:00 ರವರೆಗೆ ಮಹಿಳೆಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ’ಓಪನ್ ಮೈಕ್’ ಕಾರ್ಯಕ್ರಮ ಆಯೋಜಿಸಲಾಗಿದೆ. ಗಾಯನ, ನೃತ್ಯ, ಕವನ ವಾಚನ, ಮಿಮಿಕ್ರಿ, ಸ್ಟಾೃಂಡ್ ಅಪ್ ಕಾಮಿಡಿ, ವಾದ್ಯ ಸಂಗೀತ ಹಾಗೂ ಕಥೆ ಹೇಳುವಿಕೆ ಸೇರಿದಂತೆ ಯಾವುದೇ ಸೃಜನಾತ್ಮಕ ಕಲೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿ ಸಂತೋಷ (ತುಕಾಲಿ ಸಂತು) ಹಾಗೂ ಜಿ ವಾಹಿನಿಯ ಸರಿಗಮಪದ ಜ್ಯೂರಿ ಸದಸ್ಯೆ ಶೃತಿ ಪ್ರಹ್ಲಾ ದ್ ಭಾಗವಹಿಸಲಿದ್ದಾರೆ. ಪ್ರತಿ ಪ್ರದರ್ಶನಕ್ಕೆ 3 ನಿಮಿಷಗಳ ಕಾಲಾವಕಾಶ ಇರಲಿದ್ದು, ಕುಟುಂಬ ಸಮೇತ ವೀಕ್ಷಿಸಬಹುದಾದ ಗೌರವಯುತ ಪ್ರದರ್ಶನಗಳಿಗೆ ಮಾತ್ರ ಅವಕಾಶವಿದೆ. ಭಾಗವಹಿಸುವವರು 15 ನಿಮಿಷಗಳ ಮೊದಲು ಹಾಜರಾಗಬೇಕಿದ್ದು, ಪೂರ್ವ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಮಾಹಿತಿಗೆ ಸಂಪರ್ಕಿಸಿ : ಸ್ಟಾಲ್ ಬುಕ್ಕಿಂಗ್ ಹಾಗೂ ಓಪನ್ ಮೈಕ್ ನೋಂದಣಿಗಾಗಿ 70266 09891 ಅಥವಾ 70266 09847 ಸಂಪರ್ಕಿಸಬಹುದು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net