ನಾಳೆಯಿಂದ ಡಿಸೈರ್ಸ್ ಪ್ರದರ್ಶನ

ಅಲ್ಲಂಭವನ
ಅಲ್ಲಂಭವನ
Published on

ಪ್ರಮುಖ ಮುಖ್ಯಾಂಶಗಳು

  • ಡಿಸೈನರ್ ಸೀರೆಗಳು

ಬಳ್ಳಾರಿ :

ನಗರದ ಅಲ್ಲಂ ಭವನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆ ವಿಜಯವಾಣಿ ಸಹಯೋಗದೊಂದಿಗೆ ಆ.8 ಮತ್ತು 9ರಂದು ಗ್ರಾಹಕರಿಗಾಗಿ ದೇಶದ ನಾನಾ ನಗರಗಳ ವ್ಯಾಪಾರಿಗಳನ್ನೊಳಗೊಂಡ ಡಿಸೈರ್ಸ್ ಪ್ರದರ್ಶನ, ಮಾರಾಟ ಹಾಗೂ ಸಾಂಸ್ಕೃತಿಕ ಮೇಳ ಆಯೋಜಿಸಲಾಗಿದೆ.

ಬೆಳಗ್ಗೆಯಿಂದ ರಾತ್ರಿವರೆಗೆ ನಡೆಯಲಿರುವ ಈ ಮೇಳದಲ್ಲಿ ಶಾಪಿಂಗ್, ಖಾದ್ಯ ಮೇಳ ಹಾಗೂ ಸಾರ್ವಜನಿಕರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮೇಳದ ಪ್ರಮುಖ ಆಕರ್ಷಣೆಗಳು: ಹಬ್ಬದ ವಿಶೇಷ ಡಿಸೈನರ್ ಸೀರೆಗಳು, ಮಹಿಳೆ ಹಾಗೂ ಮಕ್ಕಳ ಟ್ರೆಂಡಿ ಉಡುಪುಗಳು, ಆಕರ್ಷಕ ಬೆಡ್‌ಶೀಟ್, ಮನೆ ಅಲಂಕಾರಿಕ ಸಾಮಗ್ರಿ ಹಾಗೂ ಗೋಕಾಕ್‌ನ ವಿಶೇಷ ಆಭರಣಗಳ ಸಂಗ್ರಹ ಇರಲಿದೆ. ಗ್ರಾಹಕರ ಸವಿಗೆ ನಾನಾ ರೀತಿಯ ಸ್ವಾದಿಷ್ಟ ಖಾದ್ಯಗಳ ಮಳಿಗೆಗಳು ತೆರೆಯಲಾಗಿದೆ.
ಓಪನ್ ಮೈಕ್ ಸ್ಪರ್ಧೆ: ಆ. 9ರಂದು ಸಾರ್ವಜನಿಕರ ಪ್ರತಿಭಾ ಪ್ರದರ್ಶನಕ್ಕಾಗಿ ಓಪನ್ ಮೈಕ್ ಸ್ಪರ್ಧೆ ಆಯೋಜಿಸಲಾಗಿದೆ. 6 ರಿಂದ 50 ವರ್ಷದೊಳಗಿನವರು ಭಾಗವಹಿಸಬಹುದು. 3 ನಿಮಿಷಗಳ ಕಾಲಾವಕಾಶ ನೀಡಲಿದೆ. ಹಾಡು, ನೃತ್ಯ, ಭಾಷಣ, ಕವನ ವಾಚನ ಹಾಗೂ ಸ್ಟ್ಯಾಂಡ್‌ಅಪ್ ಕಾಮಿಡಿ ಮಾಡಲಾಗುವುದು. ಮಾಹಿತಿಗಾಗಿ 70266 09847, 70266 09891 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net