ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಪಪಂ ಮಾಜಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಒಕ್ಕಲಿಗ ಸಮಾಜದ ಅಧ್ಯಕ್ಷ ಮಂಜುನಾಥ, ಕಂದಾಯ ನಿರೀಕ್ಷಕ ಪ್ರಭು ತಳವಾರ, ಮಂಜುನಾಥ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಹಸೀಲ್ದಾರ್ ವಿ.ಕೆ.ನೇತ್ರಾವತಿ ಅನಿಸಿಕೆ
ನಾಡಪ್ರಭು ಕೆಂಪೇಗೌಡ ಜಯಂತಿ
ಕೂಡ್ಲಿಗಿ: ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕದ ರಾಜಧಾನಿ ಹಾಗೂ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ಒಕ್ಕಲಿಗ ಸಮಾಜದಿಂದ ಶನಿವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡರು, ವಿಜಯನಗರ ಸಾಮ್ರಾಜ್ಯದ ಪಳೇಗಾರರಾಗಿದ್ದ ಯಲಹಂಕ ನಾಡಪ್ರಭುಗಳ ವಂಶಸ್ಥರು.
ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ್ದು, ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ್ದರು. ಸಾರ್ವಜನಿಕರಿಗೆ ಕೃಷಿಗೆ ಹಾಗೂ ಕುಡಿವ ನೀರಿಗಾಗಿ ಕೆರೆಗಳನ್ನು ನಿರ್ಮಿಸಿದರು. ನ್ಯಾಯ ಮತ್ತು ಸಮಾನತೆ ಅವರ ಆಡಳಿತದ ಮೂಲಮಂತ್ರವಾಗಿತ್ತು. ನ್ಯಾಯ ತಪ್ಪಿದರೆ ಜೀವ ಕೊಡುವೆ ಎಂದಿದ್ದರು.
48 ಪಾಳೇಗಾರರಿಗೆ ಪ್ರಾತಿನಿಧ್ಯ ನೀಡಿ, ಜಾತಿಭೇದವಿಲ್ಲದೆ ಎಲ್ಲ ಸಮುದಾಯಗಳಿಗೆ ಒತ್ತು ನೀಡಿದ್ದರು. ದೇವದಾಸಿ, ಬಾಲ್ಯವಿವಾಹ ಪದ್ಧತಿ ನಿಷೇಧಿಸಿ ವಿಧವಾ ವಿವಾಹಕ್ಕೆ ಅವಕಾಶ ಕಲ್ಪಿಸಿದ್ದರು. ಎಲ್ಲರಿಗೂ ಸಮಾನ ಗೌರವ ನೀಡಿ ಸರ್ವಧರ್ಮ ಸಮನ್ವಯ ಸಾಧಿಸಿದ್ದರು. ಬೆಂಗಳೂರು ಕರಗದಂತಹ ಹಬ್ಬಗಳ ಮೂಲಕ ಜನರಿಗೆ ಸೌಹಾರ್ದತೆ ತಿಳಿಸಿದ್ದರು ಎಂದರು. ನಂತರ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪಪಂ ಮಾಜಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಒಕ್ಕಲಿಗ ಸಮಾಜದ ಅಧ್ಯಕ್ಷ ಮಂಜುನಾಥ, ಕಂದಾಯ ನಿರೀಕ್ಷಕ ಪ್ರಭು ತಳವಾರ, ಮಂಜುನಾಥ ಇತರರಿದ್ದರು.