ದೇವದುರ್ಗ ತಾಪಂ ಇಒ ಕೆ.ರಾಜೇಂದ್ರಕುಮಾರಗೆ ರಾಜ್ಯ ಘನತ್ಯಾಜ್ಯ ವಿಲೇವಾರಿ ಘಟಕ ನೌಕರರ ಸಂಘ ಮನವಿ ಸಲ್ಲಿಸಿತು. ಸಿಐಟಿಯು ಸಂಚಾಲಕ ಗಿರಿಯಪ್ಪ ಪೂಜಾರಿ, ಮುಖಂಡರಾದ ಕರಿಯಮ್ಮ, ಸುಧಾ, ಫರಿದಾಬೇಗಂ, ಆರ್.ಚನ್ನಬಸಮ್ಮ, ತಾಯಮ್ಮ, ಲಲಿತಾ, ಬಸಲಿಂಗಮ್ಮ, ಗೋವಿಂದಮ್ಮ, ಲಕ್ಷ್ಮೀ, ಅನ್ನಪೂರ್ಣ, ರೇಣುಕಮ್ಮ, ಮರಿಲಿಂಗಮ್ಮ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಘನತ್ಯಾಜ್ಯ
ಸಂಘ ಮನವಿ
ನೌಕರರ
ದೇವದುರ್ಗ: ತಾಲೂಕಿನ ಎಲ್ಲ 33ಗ್ರಾಪಂಯಲ್ಲಿ ಕಸ ವಿಲೇವಾರಿ ಕೆಲಸ ಮಾಡುವ ನೌಕರರ ಬಾಕಿಯಿರುವ 20ತಿಂಗಳ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ತಾಪಂ ಇಒ ಕೆ.ರಾಜೇಂದ್ರಕುಮಾರಗೆ ರಾಜ್ಯ ಘನತ್ಯಾಜ್ಯ ವಿಲೇವಾರಿ ಘಟಕ ನೌಕರರ ಸಂಘ (ಸಿಐಟಿಯು ಸಂಯೋಜಿತ) ಬುಧವಾರ ಮನವಿ ಸಲ್ಲಿಸಿತು.
ತಾಲೂಕಿನ 33ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ನೌಕರರಾಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನಿತ್ಯ ಕಸ ವಿಲೇವಾರಿ ವಾಹನಗಳಲ್ಲಿ ಹಳ್ಳಿಹಳ್ಳಿಗೆ ಸಂಚಾರ ಮಾಡಿ ಕಸ ಸಂಗ್ರಹಿಸಿ ಸ್ವಚ್ಛತೆ ಕೈಗೊಳ್ಳುತ್ತಿದ್ದಾರೆ.
ಇದರಿಂದ ಹಳ್ಳಿಗಳ ಕಸ ಹಾಗೂ ರೋಗಮುಕ್ತವಾಗಿವೆ. ಆದರೆ, ಇದರಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 20ತಿಂಗಳಿನಿಂದ ವೇತನ ನೀಡಿಲ್ಲ. ನೌಕರರು ಜೀವನ ನಡೆಸುವುದು ಕಷ್ಟವಾಗಿದೆ. ವೇತನ ಪಾವತಿಗೆ ಹಲವು ದಿನಗಳಿಂದ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಲ್ಲ ನೌಕರರ ಬಾಕಿ ಇರುವ 20ತಿಂಗಳ ವೇತನ ಪಾವತಿ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರತಿತಿಂಗಳು ವೇತನ ನೀಡಲು ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಜೂ.16ರಿಂದ ಕೆಲಸ ಬಹಿಷ್ಕರಿಸಿ ತಾಪಂ ಕಚೇರಿ ಮುಂದೆ ಕುಟುಂಬ ಸಮೇತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.