ರಜಪೂತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಲಿ

ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ರಜಪೂತ ಸಮಾಜದವರು ಮನವಿ ಸಲ್ಲಿಸಿದರು. ಪ್ರಮುಖರಾದ ಕೆ.ಇಂದ್ರಜಿತ್‌ಸಿಂಗ್, ಲಕ್ಷ್ಮಣಸಿಂಗ್, ಜಮನ್‌ಸಿಂಗ್, ಗೋವರ್ಧನ್‌ಸಿಂಗ್ ಇತರರಿದ್ದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ರಜಪೂತ ಸಮಾಜದವರು ಮನವಿ ಸಲ್ಲಿಸಿದರು. ಪ್ರಮುಖರಾದ ಕೆ.ಇಂದ್ರಜಿತ್‌ಸಿಂಗ್, ಲಕ್ಷ್ಮಣಸಿಂಗ್, ಜಮನ್‌ಸಿಂಗ್, ಗೋವರ್ಧನ್‌ಸಿಂಗ್ ಇತರರಿದ್ದರು.
Published on

ಕಂಪ್ಲಿ: ರಜಪೂತ ಅಭಿವೃದ್ಧಿ ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸುವಂತೆ ಕಂಪ್ಲಿ ರಜಪೂತ ಸಮಾಜದವರು ಸೋಮವಾರ ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಕೆ.ಇಂದ್ರಜಿತ್‌ಸಿಂಗ್ ಮಾತನಾಡಿ, ರಾಜ್ಯದ ರಜಪೂತ ಸಮುದಾಯ ದವರು ನಾನಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ರಜಪೂತರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುವಂತೆ ಅನೇಕ ವರ್ಷಗಳಿಂದ ಮನವಿ ಮಾಡುತ್ತಿದ್ದು, ಅಧಿವೇಶನದಲ್ಲಿ ಸಿಎಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರಿಗೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಲಕ್ಷ್ಮಣಸಿಂಗ್, ಜಮನ್‌ಸಿಂಗ್, ಗೋವರ್ಧನ್‌ಸಿಂಗ್, ವಿನಯ್‌ಸಿಂಗ್, ಪೃಥ್ವಿರಾಜ ಸಿಂಗ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net