ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಒತ್ತಾಯ

ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಲ್ಲಿ  ಶ್ರೀಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಬೇಕು ಎಂಬುದಾಗಿ ಆಗ್ರಹಿಸಿ, ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು. ಪದಾಧಿಕಾರಿಗಳಾದ  ಜನಾರ್ದನ ನಾಯಕ, ಕೆ.ಕೆ. ಹಾಳ್ ಸತ್ಯಣ್ಣ, ವಕೀಲ ಜಯರಾಮ್, ರುದ್ರಪ್ಪ, ಸತ್ಯನಾರಾಯಣ, ರಂಜಿತ್‌ಕುಮಾರ್, ನಾಗರಾಜ್, ವಾಲ್ಮೀಕಿ ದುರ್ಗಪ್ಪ, ಬೆನಕನ ಸುರೇಶ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಾಲ್ಮೀಕಿ ನಾಯಕರ ಒಕ್ಕೂಟದಿಂದ ಪ್ರತಿಭಟನೆ
  • ಸಮಾಜದ ಭಾವನೆಗಳಿಗೆ ಧಕ್ಕೆ
ಳ್ಳಾರಿ : ನಗರದ ವಾಲ್ಮೀಕಿ ವೃತ್ತದಲ್ಲಿ ನೂತನವಾಗಿ ಶ್ರೀಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳಿಸಬೇಕು ಎಂಬುದಾಗಿ ಆಗ್ರಹಿಸಿ, ಇಲ್ಲಿನ ಗಡಿಗಿ ಚನ್ನಪ್ಪ ವೃತ್ತದಲ್ಲಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ವತಿಯಿಂದ ಪ್ರತಿಭಟಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಮುದಿಮಲ್ಲಯ್ಯ ಮಾತನಾಡಿ, ಸರ್ಕಾರದ ಅನುದಾನದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಪುತ್ಥಳಿಯ ಅನಾವರಣಕ್ಕೆ ಕಳೆದ ಜ.3ರಂದು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ಕೆಲ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ಮುಂದೂಡಲಾಯಿತು.
ಆದರೆ, ಕೆಲ ತಿಂಗಳು ಕಳೆದರೂ ಅನಾವರಣಗೊಳ್ಳದೆ ಪುತ್ಥಳಿಯನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿ, ಸುತ್ತಲೂ ತಡೆಗೋಡೆ ನಿರ್ಮಿಸಿರುವುದು ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದ್ದು, ಮಹರ್ಷಿ ವಾಲ್ಮೀಕಿಯವರಿಗೆ ಅಗೌರವ ತೋರಿದಂತಾಗಿದೆ ಎಂದು ಆರೋಪಿಸಿದರು. ಮಳೆ, ಬಿಸಿಲು ಹಾಗೂ ಗಾಳಿಗೆ ಪುತ್ಥಳಿಯನ್ನು ಬಿಟ್ಟಿರುವುದು ಜಿಲ್ಲಾಡಳಿತದ ನಿರ್ಲಕ್ಷೃ ತೋರಿಸುತ್ತಿದ್ದು, ಇದರಿಂದ ವಾಲ್ಮೀಕಿ ಸಮುದಾಯಕ್ಕೆ ನೋವು ಮತ್ತು ಅವಮಾನ ಉಂಟಾಗಿದೆ. ಜಿಲ್ಲಾಡಳಿತವು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಂಡು ಜುಲೈ ತಿಂಗಳೊಳಗೆ ಅಧಿಕೃತವಾಗಿ ಪುತ್ಥಳಿ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿದರು.
ಇಲ್ಲವಾದಲ್ಲಿ ಸಮಸ್ತ ವಾಲ್ಮೀಕಿ ಸಮಾಜದ ಮುಖಂಡರು ಪಕ್ಷಾತೀತವಾಗಿ ಶಾಂತಿ ಹಾಗೂ ಕಾನೂನು ಚೌಕಟ್ಟಿನೊಳಗೆ ಪುತ್ಥಳಿಯ ಮೇಲಿರುವ ಸಿಲ್ಕ್ ಬಟ್ಟೆ ಹಾಗೂ ಸುತ್ತಲಿನ ತಡೆಬಟ್ಟೆಯನ್ನು ತೆರವುಗೊಳಿಸಲಾಗುವುದು. ಅಭಿಷೇಕ, ಪೂಜೆ ಮತ್ತು ಮಾಲಾರ್ಪಣೆ ನಡೆಸಿ ಸ್ವಯಂ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net