ಸಿಎನ್‌ಜಿ ಘಟಕ ಮರು ಆರಂಭಕ್ಕೆ ಆಗ್ರಹ

ಕೂಡ್ಲಿಗಿಯಲ್ಲಿ ಸೋಮವಾರ ಗ್ರೇಡ್-2 ತಹಸೀಲ್ದಾರ್ ಎಚ್.ರಾಮಸ್ವಾಮಿ ಹಾಗೂ ಬಂಕ್ ಮಾಲೀಕ ಕೊಟ್ರಯ್ಯ ಅವರಿಗೆ ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್‌ನಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಮಂಜು ಮಯೂರ, ಕಾರ್ಮಿಕ ಮುಖಂಡ ಸಿ.ವಿರೂಪಾಕ್ಷಪ್ಪ, ನಲ್ಲಮುತ್ತಿ ದುರುಗೇಶ್, ಡಿ.ಚೌಡಪ್ಪ ಸೇರಿದಂತೆ ಇತರರಿದ್ದರು.

Published on

ಸಂಡೂರು ರಸ್ತೆಯಲ್ಲಿರುವ ಯಶಸ್-ಶ್ರೇಯಾ ಪೆಟ್ರೋಲ್ ಬಂಕ್‌ನಲ್ಲಿ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿರುವ ಸಿಎನ್‌ಜಿ ಘಟಕವನ್ನು ತಕ್ಷಣವೇ ಮರು ಆರಂಭಿಸಬೇಕು ಎಂದು ಒತ್ತಾಯಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಪದಾಧಿಕಾರಿಗಳು ಸೋಮವಾರ ಗ್ರೇಡ್-2 ತಹಸೀಲ್ದಾರ್ ಎಚ್.ರಾಮಸ್ವಾಮಿ ಮೂಲಕ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಯೂನಿಯನ್‌ನ ತಾಲೂಕು ಸಮಿತಿ ಅಧ್ಯಕ್ಷ ಮಂಜು ಮಯೂರ ಮಾತನಾಡಿ, ಈ ಬಂಕ್‌ನ ಸಿಎನ್‌ಜಿ ಘಟಕವನ್ನೇ ನಂಬಿಕೊಂಡು ಯುವಕರು ಸಿಎನ್‌ಜಿ ಚಾಲಿತ ಆಟೋ ಮತ್ತು ಕಾರುಗಳನ್ನು ಖರೀದಿಸಿ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಘಟಕ ಸ್ಥಗಿತಗೊಂಡು ಎರಡು ತಿಂಗಳು ಕಳೆದರೂ ಇಂಧನ ಪೂರೈಕೆ ಆರಂಭವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಪರ್ಯಾಯ ಹಾಗೂ ಹೆಚ್ಚಿನ ದರದ ಇಂಧನದ ಮೊರೆ ಹೋಗಬೇಕಾಗಿದ್ದು, ಚಾಲಕರು ಮತ್ತು ಮಾಲೀಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಮನವಿ ಸಲ್ಲಿಕೆಯ ವೇಳೆ ಬಂಕ್ ಮಾಲೀಕ ಕೊಟ್ರಯ್ಯ, ಕಾರ್ಮಿಕ ಮುಖಂಡರಾದ ಸಿ.ವಿರೂಪಾಕ್ಷಪ್ಪ, ನಲ್ಲಮುತ್ತಿ ದುರುಗೇಶ್, ಡಿ.ಚೌಡಪ್ಪ, ರಾಮು, ನಾಗರಾಜ, ಮಲ್ಲಿಕಾರ್ಜುನ, ಮಂಜುನಾಥ, ಕೋಟೆಪ್ಪ, ಅಂಜಿನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net