ದೇವದಾಸಿಯರ ಮರು ಸರ್ವೇಗೆ ಆಗ್ರಹ

ಯು.ಬಸವರಾಜ್
ಯು.ಬಸವರಾಜ್
Published on

ಪ್ರಮುಖ ಮುಖ್ಯಾಂಶಗಳು

  • ದೇವದಾಸಿ
ಬಳ್ಳಾರಿ : ರಾಜ್ಯ ಸರ್ಕಾರ ಈಚೆಗೆ ಪೂರ್ಣಗೊಳಿಸಿರುವ ವಿಮುಕ್ತ ದೇವದಾಸಿಯರ ಸಮೀಕ್ಷೆಯು ಅಪೂರ್ಣಗೊಂಡಿದ್ದು, ಮರು ಸರ್ವೇ ನಡೆಸಬೇಕು ಎಂದು ರಾಜ್ಯ ದೇವದಾಸಿಯರ ಮಹಿಳಾ ವಿಮೋಚನಾ ಸಂಘದ ಗೌರವಾಧ್ಯಕ್ಷ ಯು.ಬಸವರಾಜ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಮುಕ್ತ ದೇವದಾಸಿ ಮಹಿಳೆಯರ ಬಹಳ ದೊಡ್ಡ ಸಂಖ್ಯೆಯಲ್ಲಿನ ಹಿರಿಯ ಮಹಿಳೆಯರು ಈಗಾಗಲೇ ಮೃತಪಟ್ಟಿದ್ದಾರೆ. ಅವರಿಗೆ ಯಾವುದೇ ಸೌಲಭ್ಯಗಳು ಸವಲತ್ತುಗಳು ಸಿಗದೆ ಆ ಪದ್ಧತಿಯಲ್ಲಿಯೇ ನಲುಗಿದ್ದಾರೆ. ಈ ಮಹಿಳೆಯರ ಮಕ್ಕಳು ಮೊಮ್ಮಕ್ಕಳನ್ನು ಕೂಡ ಗಣತಿಯಲ್ಲಿ ಸೇರಿಸಿಕೊಳ್ಳುವುದಕ್ಕೆ 108 ದಾಖಲಾತಿ ಕೇಳುವ ಮೂಲಕ ಗಣತಿಗೆ ಪರಿಗಣಿಸಿಲ್ಲ. ಸದ್ಯ, ಪೂರ್ಣಗೊಂಡಿರುವ ಸಮೀಕ್ಷೆಯಲ್ಲಿ ಕೇವಲ 23,285 ವಿಮುಕ್ತ ದೇವದಾಸಿಯರೆಂದು ಗುರುತಿಸಿದೆ. ಆದರೂ, ಈ ಸಮೀಕ್ಷೆಯನ್ನು ತಿರಸ್ಕಾರ ಮಾಡುವಂತಿಲ್ಲ. ಸಮೀಕ್ಷೆಯಿಂದ ಹೊರ ಉಳಿದ ಮಹಿಳೆಯರ ಎರಡು, ಮೂರು ತಲೆಮಾರಿನ ಕುಟುಂಬಗಳನ್ನು ಒಳಗೊಳ್ಳುವುದಕ್ಕೆ ಈ ಸಮೀಕ್ಷೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಬಿ.ಮಾಳಮ್ಮ, ಎ.ಸ್ವಾಮಿ, ಈರಮ್ಮ, ಸಿ.ವೀರೇಶ್ ಇದ್ದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net