ನಕಲಿ ದಾಖಲೆ ಪ್ರಕರಣ ತನಿಖೆಗೆ ಆಗ್ರಹ

ಬಳ್ಳಾರಿಯ ಡಿಸಿ ಕಚೇರಿ ಮುಂಭಾಗದಲ್ಲಿ  ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘದಿಂದ ಅಹೋರಾತ್ರಿ ಧರಣಿ ನಡೆಯಿತು. ಸಂಘಟನೆ ಪದಾಧಿಕಾರಿಗಳಾದ ವಿ.ಎಸ್. ಶಿವಶಂಕರ, ವಿ.ಮಾರುತಿ, ಜೆ.ಎಂ.ಚನ್ನಬಸಯ್ಯ, ಎಂ. ಖಲಂದರ್ ಬಾಷಾ,  ಪಂಪನಗೌಡ, ದುರುಗಪ್ಪ, ಸುಜಾತಮ್ಮ  ಇತರರಿದ್ದರು. ===

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರಾಂತ ರೈತ ಸಂಘದಿಂದ ಧರಣಿ

ಬಳ್ಳಾರಿ :

ಸಿರಗುಪ್ಪ ತಾಲೂಕಿನ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಭೂಮಿಯ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ನೋಂದಣಿ ಎಸಗಿರುವ ಅಧಿಕಾರಿ ಹಾಗೂ ಭೂಮಾಫಿಯಾ ವಿರುದ್ಧ, ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಕರ್ನಾಟಕ ಪ್ರಾಂತ ರೈತ ಸಂಘ ಸಮಿತಿಯಿಂದ ಅಹೋರಾತ್ರಿ ಧರಣಿ ನಡೆಯಿತು.

ಸಿರಗುಪ್ಪ ಉಪ ನೋಂದಣಿ ಕಚೇರಿಯಲ್ಲಿ ಹಳೇಕೋಟೆ, ದೇವಲಾಪುರ, ಸಿರಿಗೇರಿ ಸೇರಿದಂತೆ ಐದು ಗ್ರಾಮಗಳ ಸುಮಾರು 300 ಎಕರೆಗೂ ಹೆಚ್ಚು ಗೈರು ಪಟ್ಟಾದಾರರ ಹಾಗೂ ಇನಾಂ ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ನೋಂದಣಿ ಮಾಡಲಾಗಿದೆ ಆರೋಪಿಸಲಾಗಿದೆ. ಅಕ್ರಮ ಭೂ ನೋಂದಣಿಗೆ ಕಾರಣರಾದ ಸಿರಗುಪ್ಪ ಉಪ ನೋಂದಣಿ ಅಧಿಕಾರಿ ಯಲ್ಲರೆಡ್ಡಿ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ ತನಿಖೆ ನಡೆಸಬೇಕು. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ 18 ರೈತ ಮುಖಂಡರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಗೈರು ಪಟ್ಟಾದಾರರ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ನೈಜ ಬಡ ರೈತರಿಗೆ ತಕ್ಷಣವೇ ಹಕ್ಕು ಪತ್ರ ನೀಡಬೇಕು ಹಾಗೂ ಸರ್ಕಾರ ಪಾರ್ಮ್ 1 ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net