ಕಾಂಗ್ರೆಸ್ ಎಂದಿಗೂ ಮಹಿಳೆಯರಿಗೆ ಪ್ರೋತ್ಸಾಹಿಸಿ ಅವರ ಜತೆಗಿರುವುದು ಇತಿಹಾಸವಿದೆ. 2023ರಲ್ಲಿ ಹೊಸ ಜನಗಣತಿ ನಡೆಸದೆ, 2011ರ ಜನಗಣತಿಯ ಆಧಾರದ ಮೇಲೆ ಮುಂದುವರೆಯಲು ಸಾಧ್ಯವಿಲ್ಲ ಎಂಬುದಾಗಿ ಎನ್‌ಡಿಎ ಹೇಳಲಾಗಿತ್ತು, ಜಾತಿ ಗಣತಿಯಲ್ಲಿ ಎಸ್‌ಸಿ, ಎಸ್‌ಟಿ ಜತೆಗೆ ಒಬಿಸಿ ಅವರ ಗಣತಿಯು ಕೂಡ ಮಾಡಬೇಕಿತ್ತು. ಅದನ್ನು ಕೂಡ ಮಾಡಿಲ್ಲ. ಯಾವುದೇ ಒಂದು ವ್ಯವಸ್ಥಿತ ಅಧ್ಯಯನ, ಸಮಿತಿ, ವರದಿ ಮತ್ತು ಆಯೋಗ ಅಭಿಪ್ರಾಯ ಇಲ್ಲದೆ ಏಕಾಏಕಿ 543 ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಏರಿಸುವ ಉದ್ದೇಶ ಹೊಂದಿತ್ತು. ಇದರಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿತ್ತು. ಎನ್‌ಡಿಎ ಅವರಿಗೆ ಬಿಲ್ ಪಾಸ್ ಮಾಡುವುದಕ್ಕೆ ಸಂಖ್ಯೆ ಇಲ್ಲದಿದ್ದರೂ ಕೂಡ ಮಸೂದೆಗೆ ಅಂಗೀಕಾರಕ್ಕೆ ಪಟ್ಟುಹಿಡಿದಿದ್ದರು. ಕಾರಣ ತಮಿಳುನಾಡು ಮತ್ತು ಪಕ್ಷಿಮ ಬಂಗಾಳ ಚುನಾವಣೆಗಳಲ್ಲಿ ದಿಕ್ಕು ತಪ್ಪಿಸುವುದು. ಸಂಸದರನ್ನು ದೆಹಲಿಯಲ್ಲಿಯೇ ಉಳಿಸಿಕೊಂಡು ಅವರನ್ನು ಚುನಾವಣೆ ಪ್ರಚಾರಕ್ಕೆ ಹೋಗಲಾರದೆ ತಡೆ ಹಿಡಿಯುವ ಕುತಂತ್ರ ಬಿಜೆಪಿ ರೂಪಿಸಿತ್ತು ಎಂದು ಅಕ್ರೋಶ ಹೊರಹಾಕಿದರು.