ಗುಡೇಕೋಟೆಗೆ ಪ್ರತ್ಯೇಕ ವಿದ್ಯುತ್ ಮಾರ್ಗ ಕಲ್ಪಿಸಿ

ಗುಡೇಕೋಟೆಗೆ ಪ್ರತ್ಯೇಕ ವಿದ್ಯುತ್ ಮಾರ್ಗ ಮಂಜೂರಿಗೆ ಒತ್ತಾಯಿಸಿ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು ಕೂಡ್ಲಿಗಿಯಲ್ಲಿ ಬಳ್ಳಾರಿ ವಿಭಾಗೀಯ ಜೆಸ್ಕಾಂ ಅಧೀಕ್ಷಕ ಅಭಿಯಂತರ ತೇಜಾನಾಯ್ಕಗೆ ಮನವಿ ಸಲ್ಲಿಸಿದರು. ಕರವೇ ಗ್ರಾಮ ಘಟಕ ಅಧ್ಯಕ್ಷ ಜೆ. ಶಿವಕುಮಾರ್, ಕೂಡ್ಲಿಗಿ ಕರವೇ ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ, ಮಡಿವಾಳ ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ, ಲಾರಿ ತಿಪ್ಪೇಶ್, ಹುಲಿರಾಜ ಎಂ, ಗೋವಿಂದಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜೆಸ್ಕಾಂಗೆ ಕರವೇ ಗ್ರಾಮ ಘಟಕ ಒತ್ತಾಯ

ಕೂಡ್ಲಿಗಿ:

ತಾಲೂಕಿನ ಗುಡೇಕೋಟೆ ಗ್ರಾಮಕ್ಕೆ ಪ್ರತ್ಯೇಕ ವಿದ್ಯುತ್ ಮಾರ್ಗ ಮಂಜೂರು ಮಾಡುವಂತೆ ಒತ್ತಾಯಿಸಿ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು ಪಟ್ಟಣದ ಕಚೇರಿಯಲ್ಲಿ ಬಳ್ಳಾರಿ ವಿಭಾಗೀಯ ಜೆಸ್ಕಾಂ ಅಧೀಕ್ಷಕ ಅಭಿಯಂತರ ತೇಜಾನಾಯ್ಕಗೆ ಶುಕ್ರವಾರ ಮನವಿ ಸಲ್ಲಿಸಿದರು.

ಗುಡೇಕೋಟೆ ಕರವೇ ಅಧ್ಯಕ್ಷ ಜೆ.ಶಿವಕುಮಾರ್ ಮಾತನಾಡಿ, ಹೋಬಳಿಯ ಎಲ್ಲ ಗ್ರಾಮಗಳಿಗೆ ಒಂದೇ ಮುಖ್ಯ ವಿದ್ಯುತ್ ಪ್ರಸರಣ ಲೈನ್ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಅಧಿಕ ಒತ್ತಡ ಉಂಟಾಗಿ ಹೋಬಳಿಯಾದ್ಯಂತ ಸತತವಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಗ್ರಾಮದಲ್ಲಿ ಸಣ್ಣ ತಾಂತ್ರಿಕ ದೋಷ ಅಥವಾ ಮರ ಬಿದ್ದರೂ ಇಡೀ ಹೋಬಳಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಈ ಪ್ರದೇಶದಲ್ಲಿ ನಿರ್ವಹಣೆಗೆ ಲೈನ್‌ಮ್ಯಾನ್ ಹಾಗೂ ಅಗತ್ಯ ಸಿಬ್ಬಂದಿ ಕೊರತೆ ಇದೆ. ಇದರಿಂದ ತುರ್ತು ಸಂದರ್ಭದಲ್ಲಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಗುಡೇಕೋಟೆ ಗ್ರಾಮದ ಜನಸಂಖ್ಯೆ ಹಾಗೂ ವಾಣಿಜ್ಯ ಮಹತ್ವ ಪರಿಗಣಿಸಿ ಗ್ರಾಮಕ್ಕೆ ಪ್ರತ್ಯೇಕ ವಿದ್ಯುತ್ ಪ್ರಸರಣ ಮಾರ್ಗ ಮಂಜೂರು ಮಾಡಬೇಕು. ಲೈನ್‌ಮನ್ ಹಾಗೂ ಅಗತ್ಯ ಸಿಬ್ಬಂದಿ ನೇಮಿಸಿ ವಿದ್ಯುತ್ ತೊಂದರೆ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಕೂಡ್ಲಿಗಿ ಕರವೇ ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ, ಮಡಿವಾಳ ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ, ಲಾರಿ ತಿಪ್ಪೇಶ್, ಹುಲಿರಾಜ ಎಂ, ಗೋವಿಂದಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net