ರಸ್ತೆ ಒತ್ತುವರಿ ತೆರವಿಗೆ ಗಡುವು

ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಗ್ರಾಪಂನಿಂದ ಶಾಂತಿಸಭೆ ನಡೆಸಲಾಯಿತು. ತಾಪಂ ಇಒ ಕೆ.ಬಿ.ನಿರ್ಮಲಾ, ಆರ್‌ಐ ಸುರೇಶ್, ವಿಎ ಶಫೀ, ಪಿಡಿಒ ಅನಿಲ್ ಕುಮಾರ್, ಬಸವನಗೌಡ ಇತರರಿದ್ದರು.
ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಗ್ರಾಪಂನಿಂದ ಶಾಂತಿಸಭೆ ನಡೆಸಲಾಯಿತು. ತಾಪಂ ಇಒ ಕೆ.ಬಿ.ನಿರ್ಮಲಾ, ಆರ್‌ಐ ಸುರೇಶ್, ವಿಎ ಶಫೀ, ಪಿಡಿಒ ಅನಿಲ್ ಕುಮಾರ್, ಬಸವನಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ವಿಸ್ತರಣೆಗೆ ಸಹಕರಿಸಿ
  • ತಾಪಂ ಇಒ ಕೆ.ಬಿ.ನಿರ್ಮಲಾ ಮನವಿ
ಕುರುಗೋಡು: ರಸ್ತೆ ಒತ್ತುವರಿ ತೆರವಿಗೆ ಮೇ 28ರವರೆಗೆ ಗಡುವು ನೀಡಲಾಗಿದ್ದು, ಪ್ರತಿಯೊಬ್ಬರೂ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಾಪಂ ಇಒ ಕೆ. ಬಿ. ನಿರ್ಮಲಾ ಮನವಿ ಮಾಡಿದರು.
ಕಲ್ಲುಕಂಬ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಿಂದ ಬುಧವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. 
ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ರಸ್ತೆಯನ್ನು 38 ಅಡಿ ವಿಸ್ತರಣೆ ಮಾಡಲಾಗುವುದು ಎಂದರು. 
ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಸ್ತರಣೆ ಕಾಮಗಾರಿಯಿಂದ ಏಳಕ್ಕೂ ಹೆಚ್ಚು ಕುಟುಂಬಗಳು ಮನೆ ಇಲ್ಲದೆ ಬೀದಿಗೆ ಬೀಳಲಿದ್ದು, ಅವರಿಗೆ ಸೂಕ್ತ ಪರಿಹಾರ ನೀಡುವುದರೊಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ವಿಸ್ತೀರ್ಣವನ್ನು 32 ಅಡಿಗೆ ಇಳಿಸಬೇಕು ಎಂದು ಪಟ್ಟು ಹಿಡಿದರು. 
ಇಒ ನಿರ್ಮಲಾ ಮಾತನಾಡಿ, ಜನರ ಅಭಿಪ್ರಾಯದಂತೆ ರಸ್ತೆ ಮತ್ತು ಚರಂಡಿ ಸೇರಿ ಒಟ್ಟು 33 ಅಡಿ ವಿಸ್ತರಣೆ ಮಾಡಲಾಗುತ್ತದೆ. ಮನೆ ಕಳೆದುಕೊಂಡವರಿಂದ ಅರ್ಜಿ ಸ್ವೀಕರಿಸಿ, ಅವರಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು. 
ಮನೆ ಕಳೆದುಕೊಂಡವರು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಪಿಡಿಒ ಅನೀಲ್ ಕುಮಾರ್ ಹೇಳಿದರು. 

ಗಂಡ ತೀರಿಕೊಂಡ ಬಳಿಕ ನಾನೊಬ್ಬಳೇ ದುಡಿದು ಮನೆ ಮತ್ತು ಇಬ್ಬರು ಮಕ್ಕಳ ಜವಾಬ್ದಾರಿ ನಿರ್ವಹಿಸುತ್ತಿರುವೆ. ಈಗ ಇರುವ ಸಣ್ಣ ಮನೆಯನ್ನು ರಸ್ತೆ ಅಭಿವೃದ್ಧಿ ಹೆಸರಲ್ಲಿ ಒಡೆದು ಹಾಕಿದರೆ, ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು. ಈ ಬಗ್ಗೆ ಅಧಿಕಾರಿಗಳು, ಶಾಸಕರು ಗಮನಹರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.

— ಶಾಲಿನಿ ಸ್ಥಳೀಯ ನಿವಾಸಿ, ಕಲ್ಲುಕಂಬ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net