ಅಕ್ರಮ ಗಣಿಗಾರಿಕೆಯ ಲೂಟಿ : ಒಎಂಸಿ ಕಂಪನಿಯೂ ಆಂಧ್ರಪ್ರದೇಶದಲ್ಲಿ ಹೊಂದಿದ್ದ 68.50 ಹೆಕ್ಟೇರ್ ಗಣಿಗುತ್ತಿಗೆ ವ್ಯಾಪ್ತಿಯಲ್ಲಿ ಕೇವಲ 40,387 ಮೆಟ್ರಿಕ್ ಟನ್ ಅದಿರು ಮಾತ್ರ ಲಭ್ಯವಿತ್ತು. ಆದರೆ, ಕರ್ನಾಟಕದ ಗಡಿ ಭಾಗದ ಹಿಂದ್ ಟ್ರೇಡರ್ಸ್, ಎಂಬಿಟಿ ಕಂಪನಿಯೂ ಸಂಡೂರು ವ್ಯಾಪ್ತಿಯಲ್ಲಿ ಒಟ್ಟು 28.49 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಅದಿರನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿ ಸಾಗಿಸುವ ಮೂಲಕ 884.13 ಕೋಟಿ ರೂ. ಅಕ್ರಮ ಆದಾಯ ಗಳಿಸಿದೆ ಎಂಬುದಾಗಿ ಹೈದರಾಬಾದ್ ಸಿಬಿಐ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.