ಬಳ್ಳಾರಿ : ನಗರದ ಶ್ರೀಕೋಟೆ ಮಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕೌಶಲ್ಯಾಭಿವದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮೂರು ದಿನಗಳ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಡಿಸಿ ಕೆ.ನಾಗೇಂದ್ರ ಪ್ರಸಾದ್ ಅವರು ಭೇಟಿ ನೀಡಿ ವೀಕ್ಷಿಸಿದರು. ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರಿಂದ ಉತ್ಪಾದಿಸಿದ ಉತ್ಪನ್ನಗಳ ವಿವಿಧ ಬಗೆಯ ತಿಂಡಿ-ದಿನಿಸುಗಳ ಸ್ಟಾಲ್ ಗಳ ವೀಕ್ಷಣೆ ಮಾಡಿ ಸ್ವ-ಸಹಾಯ ಸಂಘದ ಮಹಿಳೆಯರೊಂದಿಗೆ ಕುಶಲೋಪರಿ ನಡೆಸಿ ಮಾಹಿತಿ ಪಡೆದುಕೊಂಡರು. ಮುಖ್ಯವಾಗಿ ಕನ್ನಡಿ, ಮಣಿ, ಚಿಪ್ಪು ಮತ್ತು ವರ್ಣರಂಜಿತ ದಾರಗಳನ್ನು ಬಳಸಿ, ಪ್ಯಾಚ್‌ವರ್ಕ್ ಮತ್ತು ಕ್ವಿಲ್ಟಿಂಗ್ ತಂತ್ರಗಳ ಮೂಲಕ ತಯಾರಿಸಿದ ಲಂಬಾಣಿ ಕಸೂತಿಗಳನ್ನು ವೀಕ್ಷಿಸಿ ಪ್ರಶಂಸಿದರು.