ಬಳ್ಳಾರಿಯ ಬಾಪುಜಿ ನಗರದಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದ್ದ ಎಸ್‌ಐಆರ್ ಎನ್ಯುಮಾರೇಶನ್ ಫಾರ್ಮ್ ವಿತರಣಾ ಪ್ರಕ್ರಿಯೆಯನ್ನು ಡಿಸಿ ಕೆ.ನಾಗೇಂದ್ರ ಪ್ರಸಾದ್ ವೀಕ್ಷಿಸಿದರು. ಪಾಲಿಕೆ ಉಪ ಆಯುಕ್ತ ನಂದೀಶ್, ಸಿಬ್ಬಂದಿ ನಿರಂಜನ್, ಸೌಮ್ಯ ಇದ್ದರು.
ಬಳ್ಳಾರಿ : ಇಲ್ಲಿನ ಬಾಪೂಜಿನಗರ ಬಡಾವಣೆಗೆ ಭೇಟಿ ನೀಡಿದ ಡಿಸಿ ಕೆ.ನಾಗೇಂದ್ರ ಪ್ರಸಾದ್ ಅವರು, ಸಾರ್ವಜನಿಕರಿಗೆ ವಿತರಿಸಲಾಗುತ್ತಿದ್ದ ಎಸ್‌ಐಆರ್ ಎನ್ಯುಮಾರೇಶನ್ ಫಾರ್ಮ್ ವಿತರಣಾ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಫಾರ್ಮ್ ವಿತರಣೆಯಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಮತ್ತು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪುವಂತೆ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು. ಬಳಿಕ ಅಂದ್ರಾಳ್ ಗ್ರಾಮದ ಸರ್ಕಾರಿ ಫ್ರೌಢ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಪರಿಶೀಲಿಸುವ ಜತೆಗೆ ಮಕ್ಕಳ ಜತೆಗೆ ಊಟ ಸವಿದರು. ಮಕ್ಕಳಿಗೆ ಪೌಷ್ಠಿಕ ಹಾಗೂ ಸ್ವಚ್ಛವಾದ ಆಹಾರವನ್ನು ನಿರಂತರವಾಗಿ ಒದಗಿಸುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.