ನಾಡಿದ್ದು ದಲಿತ ಜನಾಗ್ರಹ ಸಮಾವೇಶ

ಹುಸೇನಪ್ಪ
ಹುಸೇನಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ
  • ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ
ಬಳ್ಳಾರಿ : ಭೂಮಿ, ವಸತಿ, ಸರ್ಕಾರಿ ಉದ್ಯೋಗಗಳಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಜು.3ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ದಲಿತ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಹುಸೇನಪ್ಪ ಹೇಳಿದರು. ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಭೂರಹಿತ ಪರಿಶಿಷ್ಟ ಕುಟುಂಬಗಳಿಗೆ ಎರಡು ಎಕರೆ ಭೂಮಿ, ವಸತಿ ರಹಿತರಿಗೆ ಮನೆ, ಸರ್ಕಾರಿ ಇಲಾಖೆಗಳಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಪರಿಶಿಷ್ಟರ ಭೂ ಹಕ್ಕುಗಳ ರಕ್ಷಣೆಗಾಗಿ ಪಿಟಿಸಿಎಲ್ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಜತೆಗೆ ಪರಿಶಿಷ್ಟರ ಏಳಿಗೆಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಬೇಕು.
ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಜು.3ರಂದು ಪ್ರತಿಭಟನೆ ನಡೆಸಿ, ದಲಿತ ಜನಾಗ್ರಹ ಸಮಾವೇಶ ನಡೆಸಲಾಗುವುದು ಎಂದರು.
ಸಾಮಾಜಿಕವಾಗಿ ಹರಿದು ಹೋಗಿದ್ದ ದಲಿತರನ್ನು ಒಗ್ಗೂಡಿಸುವ ಮೂಲಕ ಜಾತಿ ವರ್ಗ ಶೋಷಣೆ ವಿರುದ್ಧ ಬಹುದೊಡ್ಡ ಸಮರ ಸಾರಿದ್ದು, ದಲಿತ ಸಂಘರ್ಷ ಸಮಿತಿ ಎಂಬುದನ್ನು ಯಾರು ಮರೆಯುವಂತಿಲ್ಲ. ಅದಕ್ಕಾಗಿಯೇ ಆಳುವ ಸರ್ಕಾರ ಎಚ್ಚರಿಸಲು ಸಮಾವೇಶ ಹಮ್ಮಿಕೊಂಡಿದ್ದ, ರಾಜ್ಯ ಎಲ್ಲ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದಲಿತರು ಸೇರಿ ಎಚ್ಚರಿಸಬೇಕು ಎಂದು ಕರೆ ನೀಡಿದರು. ಪದಾಧಿಕಾರಿಗಳಾದ ಪಿ. ತಾಯಪ್ಪ, ಎ.ಕೆ. ಗಂಗಾಧರ, ಎಚ್.ಚಿಕ್ಕಗಾದಿಲಿಂಗಪ್ಪ, ಈರಪ್ಪ, ಎಚ್.ಲಾಲೆಪ್ಪ, ಕೆ.ಪ್ರಕಾಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net