ಹುಲಗಪ್ಪ ವಿದ್ಯುತ್ ಕಂಬ ಹತ್ತಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾಗ ದಿಢೀರ್ ವಿದ್ಯುತ್ ಪ್ರವಹಿಸಿದೆ. ಇದರಿಂದಾಗಿ ಅವರು ಕಂಬದ ಮೇಲೆಯೇ ನೇತಾಡುತ್ತಾ ತೀವ್ರವಾಗಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಅಪಘಾತ ಸಂಭವಿಸಿದ ಸಮಯದಲ್ಲಿ ಸಹೋದ್ಯೋಗಿ ಕಾರ್ಮಿಕರು ಸ್ಥಳದಲ್ಲೇ ಇದ್ದರಾದರೂ, ವಿದ್ಯುತ್ ಪ್ರವಾಹದ ತೀವ್ರತೆಯಿಂದಾಗಿ ರಕ್ಷಿಸಲಾಗದೆ ಅಸಹಾಯಕರಾಗಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಯಾಗಿದೆ. ಯಾವುದೇ ಮುನ್ನೆಚ್ಚರಿಕೆ ವಹಿಸದೆ ಯುವಕನನ್ನು ಕಂಬಕ್ಕೆ ಹತ್ತಿಸಲಾಗಿದೆ. ಘಟನಾ ಸ್ಥಳದಲ್ಲಿ ಜೆಸ್ಕಾಂ ಅಧಿಕಾರಿ ಹಾಗೂ ಕಾಯಂ ಲೈನ್‌ಮ್ಯಾನ್ ಯಾರು ಇರಲಿಲ್ಲ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.