ಸಿಲಿಂಡರ್ ಸ್ಫೋಟ ಎರಡಂತಸ್ತಿನ ಮನೆಗೆ ಹಾನಿ

ಸಂಡೂರು ತಾಲೂಕು ತಾಳೂರು ಗ್ರಾಮದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟದಿಂದ ಮನೆ ಕುಸಿದಿರುವುದು.
ಸಂಡೂರು ತಾಲೂಕು ತಾಳೂರು ಗ್ರಾಮದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟದಿಂದ ಮನೆ ಕುಸಿದಿರುವುದು.
Published on
ಸಂಡೂರು: ತಾಳೂರು ಗ್ರಾಮದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು, ಸುಭಾನಿ ಎಂಬುವವರ ಎರಡಂತಿಸ್ತಿನ ಆರ್‌ಸಿಸಿ ಮನೆ ಜಖಂಗೊಂಡಿದೆ.
ಗ್ಯಾಸ್ ಸೋರಿಕೆ ಆಗುತ್ತಿರುವುದನ್ನು ಕಂಡ ಸುಭಾನಿ ಅವರ ಪುತ್ರ ಆಸೀಫ್ ಮನೆಯಲ್ಲಿದ್ದವರನ್ನು ಹೊರಗೆ ತಂದಿದ್ದಾನೆ. ಆದರೂ, ಘಟನೆಯಲ್ಲಿ ಪಕ್ಕದ ಮನೆಯವರಾದ ಮಾಬುಸಾಬ್ (58), ಗೌರಮ್ಮ (36), ವೀರೇಶ್(30) ಗಾಯಗೊಂಡಿದ್ದಾರೆ. ಮತ್ತಿಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆ ಮೇಲಿದ್ದ ನೀರಿನ ಟ್ಯಾಂಕ್ ಕೂಡ ಹಾನಿಯಾಗಿದೆ. ಸಂಸದ ಈ.ತುಕಾರಾಮ್, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ತೋರಣಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net